ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕೂರಿಸಿದ್ದ 61 ಆಟೋ ಜಪ್ತಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಶಾಲಾ ವಾಹನಗಳು ಹಾಗೂ ಆಟೋ ರಿಕ್ಷಾಗಳಲ್ಲಿ ಮಿತಿಗಿಂತ ಹೆಚ್ಚಿನ ವಿದ್ಯಾರ್ಥಿಗಳ ಕುರಿಸಿಕೊಂಡ ನಿಯಮ ಉಲ್ಲಂಘನೆ ಮಾಡಿದ ಅವಳಿನಗರದ 61 ಆಟೋ ರಿಕ್ಷಾ ಜಪ್ತಿ ಮಾಡಿ ಸಂಚಾರಿ ಪೊಲೀಸರು ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಇತ್ತೀಚೆಗೆ ಶಾಲೆಗಳು ಆರಂಭವಾಗಿದ್ದು, ನಿತ್ಯ ಶಾಲಾ ಮಕ್ಕಳನ್ನು ಶಾಲೆಗೆ ಬಿಡುವುದೆ ಪಾಲಕರಿಗೆ ದೊಡ್ಡ ಸವಾಲಾಗಿದೆ. ಆದರಿಂದ ಪಾಲಕರು ಆಟೋ ರಿಕ್ಷಾ ಹಾಗೂ ವಿವಿಧ ವಾಹನಗಳಿಗೆ ಮಕ್ಕಳ ಶಾಲೆಗೆ ಬಿಡಲು ಬಾಡಿಗೆ ನಿಯೋಜಿಸಿದ್ದಾರೆ. ಆದರೆ ಆಟೋ ರಿಕ್ಷಾ ಹಾಗೂ ವಾಹನ ಚಾಲಕರು ಹೆಚ್ಚು ಹಣ ಗಳಿಸುವ ಭರದದಲ್ಲಿ ಹೆಚ್ಚಿನ ಮಕ್ಕಳ ಹಾಕಿಕೊಂಡು ನಿಯಮ ಉಲ್ಲಂಘಿಸುತ್ತಿದ್ದರು.

ಇಂತಹ ಆಟೋ ರಿಕ್ಷಾ ವಾಹನ ಕಾರ್ಯಚರಣೆ ನಡೆಸಿದ ಸಂಚಾರಿ ಪೊಲೀಸರು ಮೋಟಾರ ವಾಹನ ಕಾಯ್ದೆಯಡಿ ಜಪ್ತಿ ಮಾಡಿದ್ದು, ಕಡ್ಡಾಯವಾಗಿ ನಿಯಮ ಪಾಲನೆ ಸೂಚಿಸಿದ್ದಾರೆ. ಈ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!