ಗೋಮಯದಿಂದ ತಯಾರಾದ 38 ಉತ್ಪನ್ನಗಳು: ರೈತರ ಆರ್ಥಿಕ ಅಭಿವೃದ್ಧಿಗೆ ಸಗಣಿಯೂ ಸಹಕಾರಿ

ಜಗದೀಶ ಎಂ.ಗಾಣಿಗೇರ

ಗೋಮಾತೆ ಹಾಲು ಕೊಡದಿದ್ದರೆ ಅದನ್ನು ಕಸಾಯಿಖಾನೆಗೆ ನೂಕಿಬಿಡುವುದನ್ನು ಬಿಟ್ಟು ಗೋಮಾತೆ ಹಾಲು ಕೊಡದಿದ್ದರೂ ಗೋಮಯದಿಂದ 38 ಉತ್ಪನ್ನಗಳನ್ನು ತಯಾರಿಸಿ ಆರ್ಥಿಕವಾಗಿ ರೈತರು ಲಾಭ ಮಾಡಿಕೊಳ್ಳಲು ಸಾಧ್ಯವಿದೆ ಎನ್ನುವುದನ್ನು ಗೋ ಸಂಗಮದಲ್ಲಿ ಉತ್ಪನ್ನಗಳ ತಯಾರಕರು ಮಾಡಿ ತೋರಿಸಿದ್ದಾರೆ.

ಒಂದು ಕೆ.ಜಿ. ಗೋಮಾತೆಯ ಸೆಗಣಿಯಿಂದ 300 ರೂ. ಬೆಲೆ ಬಾಳುವ ಸಾಮಾಗ್ರಿ ತಯಾರಿಸಬಹುದು ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟರು.

ಬಾಗಲಕೋಟೆಯ ಗೌರಿಶಂಕರ ಕಲ್ಯಾಣಮಂಟಪದಲ್ಲಿ ನಡೆದ ಭಾರತೀಯ ಪ್ರಾದೇಶಿಕ ಗೋತಳಿಗಳ ಸಂರಕ್ಷಣೆ, ಸಂವರ್ಧನೆ, ಸಂಶೋಧನೆಗಾಗಿ ಗೋ ಸಂಗಮ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕಡೆಯಿಂದ ಆಗಮಿಸಿದ್ದ ಗೋ ಉತ್ಪನ್ನಗಳ ಮಾರಾಟಗಾರರು ಹಾಗೂ ತಯಾರಕರು ಗೋಮಾತೆಯಿಂದ ಎಷ್ಟೊಂದು ಅದ್ಭುತ ಔಷಧ ತಯಾರಿಸಿ ಜನರ ಆರೋಗ್ಯ ದೃಷ್ಟಿಯಿಂದ ನೀಡಬಹುದು. ಹಾಗೂ ಗೋ ಸಾಕಾಣೆಕೆದಾರರು ಆರ್ಥಿಕವಾಗಿ ಸದೃಢರಾಗಬಹುದು ಎಂಬುದನ್ನು ಸಾಬೀತುಪಡಿಸಿದರು.

ಒಂದು ಕೆ.ಜಿ. ಗೋಮಾತೆಯ ಸೆಗಣಿಯಿಂದ 300 ರೂ. ಬೆಲೆ ಬಾಳುವ ಸಾಮಾಗ್ರಿಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಗೋಮಾತೆಯ ರಕ್ಷಣೆ ಮಾಡಬೇಕಾಗಿದೆ. ಗೋ ತಳಿ ಉಳಿಯಬೇಕಾಗಿದೆ. ಯಾವ ಗೋಮಾತೆಯೂ ನಮಗೆ ಹಾನಿ ಮಾಡುವುದಿಲ್ಲ, ಎಲ್ಲವೂ ಲಾಭ ನೀಡುತ್ತವೆ. ಕೇವಲ ಹಾಲು ಕರೆಯಲು ಮಾತ್ರ ಗೋ ಮಾತೆಯಲ್ಲ. ಗೋಮಯದಿಂದ ಸಾಕಷ್ಟು ಉತ್ಪನ್ನ ತಯಾರಿಸಲು ಸಾಧ್ಯವಿದೆ ಎಂದು ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.

ಕಲಬುರ್ಗಿಯ ಪಯೋನಿ ಗೋಧಾಮ ಟ್ರಸ್ಟ್‌ನವರು ಗೋಮಾತೆ ಸಗಣಿ, ಗೋಮೂತ್ರದಿಂದ ತಯಾರಿಸಿದ್ದ ದಿನಬಳಕೆಯ ವಸ್ತುಗಳು ಗಮನಸೆಳೆದವು. ಗೋ ಮಾತೆಯ ಸಗಣಿಯಿಂದ ಕೀ ಬಂಚ್, ಕೀ ಚೈನ್, ಶ್ರೀ ಚಕ್ರ, ದೀಪದ ಹಣತೆ, ಶುಭ ಲಾಭ, ವೃಕ್ಷ, ಧರಣಿ, ಸಾಬೂನು, ವಿಭೂತಿ ಹೀಗೆ ನಾನಾ ಬಗೆಯ ಸಾಮಾಗ್ರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದನ್ನು ನೋಡಲು ಜನ ಮುಗಿಬಿದ್ದಿದ್ದರು.

ಒಂದು ಗೋಮಾತೆಯ ಗೋಮೂತ್ರ, ಸಗಣಿಯಿಂದ ಒಬ್ಬ ರೈತ ನಿತ್ಯ ಸಾವಿರ ರೂ. ಲಾಭ ಮಾಡಿಕೊಳ್ಳಲು ಸಾಧ್ಯವಿದೆ. ಒಂದು ಕೆ.ಜಿ. ಗೋಮಾತೆಯ ಸಗಣಿಯನ್ನು 4 ರಿಂದ 6 ರೂ. ಕೊಟ್ಟು ಖರೀದಿಸುತ್ತೇವೆ. ಗೋಮಾತೆಯಿಂದ ಆಗುವ ಲಾಭದ ಕುರಿತು ರೈತರಿಗೆ ಹಾಗೂ ಗೋಪೂಜೆ ಮಾಡುವವರಿಗೆ ಪಯೋನಿ ಗೋಧಾಮ ಟ್ರಸ್ಟ್‌ನ ಕೃಷ್ಣಾ ಜಂಬಾವಿ ತಿಳಿಸಿದರು.

ದೊಡ್ಡಬಳ್ಳಾಪುರ ಮಾಧವ ಸೃಷ್ಟಿ ರಾಷ್ಟ್ರೋತ್ಥಾನ ಗೋಶಾಲೆಯವರು ಭಾರತೀಯ ಗೋ ತಳಿಯ ಗೋಮೂತ್ರ ಹಾಗೂ ಗೋಮಯ (ಸಗಣಿ)ಯಿಂದ ತಯಾರಿಸಿದ ಅಪ್ಪರ ರಾಸಾಯನಿಕ ರಹಿತ ಗೊಬ್ಬರ ಮಾರಾಟ ಮಾಡಿದರು. ಸಾಂಕ್ರಾಮಿಕ ರೋಗಗಳನ್ನು ಹೊಡೆದು ಹಾಕಿ ವೈರಸ್‌ಗಳನ್ನು ಕ್ರಿಮಿಕೀಟಗಳನ್ನು ನಾಶಪಡಿಸುವಂತಹ ಗೋಮಯದಿಂದ ಉತ್ಪಾದಿಸಿದ ಧೂಪಗಳನ್ನು ಸಾಕಷ್ಟು ಜನರು ಖರೀದಿಸುತ್ತಿರುವುದು ಕಂಡುಬಂದಿತು. ಇನ್ನೂ ಗೋಮಾತೆಯ ಶುದ್ಧ ತುಪ್ಪ ಅರ್ಧ ಕೆ.ಜಿ.ಗೆ 1000 ರೂ. ನೀಡಿ ಖರೀದಿಸಿದರು.

ಸಗಣಿಯಿಂದ ಮಾಡಿದಂತಹ ಹಲವಾರು ವಿಧದ ಸಾಮಾಗ್ರಿಗಳನ್ನು ವಿದೇಶಕ್ಕೂ ಕೂಡ ಪಯೋನಿ ಟ್ರಸ್ಟ್‌ನವರು ಕಳಿಸುತ್ತಿದ್ದಾರೆ.

ಗೋ ಮಾತೆಯ ಗೋಮೂತ್ರ, ಗೋಮಯದಿಂದ 38 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾಡುತ್ತೇವೆ. ಗೋಮಾತೆಯನ್ನು ನಾವು ಸರಿಯಾಗಿ ಸಾಕಾಣಿಕೆ ಮಾಡುವ ಮೂಲಕ ಆರ್ಥಿಕವಾಗಿ ಲಾಭವನ್ನು ಗಳಿಸಬಹುದು. ಒಂದು ಸಗಣಿಯಿಂದ ಹಿಡಿದು ಗೋಮೂತ್ರದವರೆಗೂ ಸಾಕಷ್ಟು ಔಷಧಿ ಸಿದ್ಧಪಡಿಸಬಹುದು. ಒಂದು ಕೆಜಿ ಸೆಗಣಿಯಲ್ಲಿ 300ರೂ. ಬೆಲೆ ಬಾಳುವ ಸಾಮಾನುಗಳನ್ನು ತಯಾರಿಸಿ ಮಾರಾಟ ಮಾಡುತ್ತೇವೆ. ನಾವು ತಯಾರಿಸುವ ಉತ್ಪನ್ನಗಳನ್ನು ದೇಶಾದ್ಯಂತ ಮಾರಾಟ ಮಾಡುತ್ತೇವೆ ಎಂದು ಕಲಬುರ್ಗಿಯ ಪಯೋನಿ ಗೋಧಾಮ ಟ್ರಸ್ಟ್ ನ ಕೃಷ್ಣಾ ಜಂಬಾವಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!