ಟ್ಯುನಿಷಿಯಾ ಕರಾವಳಿಯಲ್ಲಿ ಭಾರೀ ದುರಂತ: ಐವರ ಸಾವು, ಹಲವರು ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟ್ಯುನಿಷಿಯಾ ಕರಾವಳಿಯಲ್ಲಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಮೂರು ದೋಣಿಗಳು ಮಗುಚಿ ಬಿದ್ದ ಪರಿಣಾಮವಾಗಿ ಐವರು ಸಾವನ್ನಪ್ಪಿದ್ದು, ಹಲವರು ನಾಪತ್ತೆಯಗಿದ್ದಾರೆ. ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಐವರು ಆಫ್ರಿಕನ್ನರು ಎನ್ನಲಾಗಿದೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ ಎಂದು ಟುನೀಶಿಯಾದ ಕೋಸ್ಟ್ ಗಾರ್ಡ್ ಹೇಳಿದ್ದಾರೆ. ಪ್ರದೇಶದಲ್ಲಿ ಒಂದು ಮಗು ಸೇರಿದಂತೆ ಐದು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸ್ಫ್ಯಾಕ್ಸ್ ಪ್ರಾಸಿಕ್ಯೂಟರ್ ಫೌಜಿ ಮಸ್ಮೌಡಿ ಹೇಳಿದ್ದಾರೆ.

ಮೂರು ದೋಣಿಗಳು ಸಮುದ್ರದಲ್ಲಿ ಮುಳುಗಿ 73 ವಲಸಿಗರನ್ನು ರಕ್ಷಿಸಲಾಗಿದೆ ಮತ್ತು 47 ಜನರು ಕಳೆದುಹೋದರು ಎಂದು ಫೌಜಿ ಮಸ್ಮೌದಿ ಹೇಳಿದರು. ಇವು ಕಬ್ಬಿಣದ ದೋಣಿಗಳಾಗಿರುವುದರಿಂದ ಸಮುದ್ರದ ನೀರಿನಲ್ಲಿ ಮುಳುಗಿವೆ ಎನ್ನಲಾಗಿದೆ. ಟ್ಯುನೀಶಿಯಾದಿಂದ ದೋಣಿ ಮೂಲಕ ವಲಸೆ ಹೋಗುವ ಪ್ರಯತ್ನಗಳು ಹೆಚ್ಚುತ್ತಿರುವಾಗ ಈ ದುರಂತ ಸಂಭವಿಸಿದೆ. ಈ ವರ್ಷ ದೋಣಿ ಅಪಘಾತದಲ್ಲಿ ಇದುವರೆಗೂ 500 ಮಂದಿ ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here