ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಸಿಇಟಿ ಫಲಿತಾಂಶ ನಾಳೆ ಬೆಳಿಗ್ಗೆ 9:30 ಕ್ಕೆ ಅಧಿಕೃತ ವೆಬ್ಸೈಟ್ kea.kar.nic.in ನಲ್ಲಿ ಪ್ರಕಟವಾಗಲಿದೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಸಿಇಟಿ-2023ರ ಬಹು ನಿರೀಕ್ಷಿತ ಫಲಿತಾಂಶಗಳನ್ನು ಬೆಂಗಳೂರಿನ ಮಲ್ಲೇಶ್ವರಂನ 18ನೇ ಕ್ರಾಸ್ನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಆವರಣದಲ್ಲಿ ಪ್ರಕಟಿಸಲಿದ್ದಾರೆ.
ಅಧಿಕೃತ ಬಿಡುಗಡೆಯ ನಂತರ, ಬೆಳಿಗ್ಗೆ 11.00 ರಿಂದ CET-2023 ಫಲಿತಾಂಶಗಳನ್ನು KEA ವೆಬ್ಸೈಟ್ kea.kar.nic.in ನಲ್ಲಿ ಸಾರ್ವಜನಿಕರು ಪರಿಶೀಲಿಸಬಹುದು.
ಫಲಿತಾಂಶ ಪರಿಶೀಲನೆ ಹೇಗೆ?
ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದ ಮೂಲಕ ಅದನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ. KCET ಸ್ಕೋರ್ ಕಾರ್ಡ್ ಅನ್ನು ಅಧಿಕೃತ ವೆಬ್ಸೈಟ್ಗಳಾದ kea.kar.nic.in, cetonline.karnataka.gov.in ಮತ್ತು karresults.nic.in ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತಮ್ಮ ಕರ್ನಾಟಕ CET ಫಲಿತಾಂಶ 2023 ಅನ್ನು ಪ್ರವೇಶಿಸಲು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.