ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದಷ್ಟು ಜನ ಯುವಕರು ಸೇರಿಕೊಂಡು ಸ್ನೇಹಿತನ ಮದುವೆ ದಿನ ‘ಮೊದಲ ರಾತ್ರಿಯ ಸಂಭ್ರಮ’ ಎಂದು ಬರೆದಿರುವ ಬ್ಯಾನರ್ ಅಳವಡಿಸಿರುವ ಘಟನೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ಕದ್ರಿ ಪೊಲೀಸ್ ಠಾಣೆಯ ಕಂಪೌಂಡ್ ಗೋಡೆಗೆ ತಾಗಿಕೊಂಡಂತೆ ಈ ಬ್ಯಾನರ್ ಹಾಕಲಾಗಿದ್ದು, ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾರ್ವಜನಿಕವಾಗಿ ಅಶ್ಲೀಲ ಸಂದೇಶ ಸಾರುವ ಬ್ಯಾನರ್ ಅಳವಡಿಸಿರುವುದರ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ. ಸಮಾಜದಲ್ಲಿ ಮುಜುಗರ ಸನ್ನಿವೇಶ ಉಂಟು ಮಾಡುವ ಬ್ಯಾನರ್ ಹಾಕಿದರವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ವಿವಾಹದ ಮೊದಲ ರಾತ್ರಿಗೆ ಶುಭಾಶಯ ಕೋರಿ ಅಳವಡಿಸಿದ್ದ ಅನಧಿಕೃತ ಬ್ಯಾನರ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆ ಮಂಗಳೂರು ಮಹಾನಗರ ಪಾಲಿಕೆ ಅದನ್ನು ತೆರವುಗೊಳಿಸಿದೆ.