ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಂದಿರಾ ಕ್ಯಾಂಟೀನ್ ಕಳೆ ಹೆಚ್ಚಾಗಿದೆ. ಕಡಿಮೆ ಹಣದಲ್ಲಿ ನಿತ್ಯವೂ ಕಾರ್ಮಿಕರಿಗೆ ಬಡವರಿಗೆ ಊಟ ಸಿಗುವ ಇಂದಿರಾ ಕ್ಯಾಂಟೀನ್‌ನಲ್ಲಿ ಇದೀಗ ಪ್ರತಿದಿನ ಮೊಟ್ಟೆ ಕೂಡ ಸಿಗಲಿದೆ.
ಹೌದು, ಪೌಷ್ಠಿಕತೆ ಬಗ್ಗೆ ಆಲೋಚಿಸಿದ ಸಿದ್ದು ಸರ್ಕಾರ ಮೊಟ್ಟೆ ನೀಡುವ ಆಲೋಚನೆಯನ್ನು ಮಾಡಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚು ಪೌಷ್ಠಿಕಾಂಶ ಹೊಂದಿದ ಆಹಾರ ಮೊಟ್ಟೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಸದ್ಯದಲ್ಲೇ ಇಂದಿರಾ ಕ್ಯಾಂಟೀನ್‌ನಲ್ಲಿ ಮೊಟ್ಟೆ ಸಿಗಲಿದೆ.
ವಾರದಲ್ಲಿ ಮೂರು ದಿನವಾದರೂ ಮೊಟ್ಟೆ ನೀಡುವಂತೆ ಕಾಂಗ್ರೆಸ್ ಪಾಲಿಕೆ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದು, ಮೆನು ಬದಲಾವಣೆಗೆ ಒತ್ತಾಯ ಮಾಡಿದ್ದರು.