ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮುಂದುವರಿದಿದ್ದು, ಭದ್ರತಾ ಪಡೆಗಳು ಮತ್ತು ದುಷ್ಕರ್ಮಿಗಳ ನಡುವೆ ಘರ್ಷಣೆಯಾಗಿದೆ.
ಹಲವಾರು ಮನೆಗಳಿಗೆ ಗುಂಪೊಂದು ಬೆಂಕಿ ಹಚ್ಚಲು ಆರಂಭಿಸಿದ್ದು, ಉದ್ರಿಕ್ತರನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಇಂಫಾಲ್ನ ನ್ಯೂ ಚೆಕಾನ್ನಲ್ಲಿ ಬಲಪ್ರಯೋಗ ಮಾಡಿವೆ. ಈ ವೇಲೆ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್ಗಳನ್ನು ಹಾರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ನಂತರ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಕಾರ್ಯಚಾರಣೆ ಆರಂಭಿಸಿವೆ. ಕಾರ್ಯಚರಣೆ ತೀವ್ರಗೊಂಡಿದ್ದರಿಂದ ಹೊಸದಾಗಿ ಹಿಂಸಾಚಾರ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
‘ಇತ್ತೀಚಿನ ಹಿಂಸಾಚಾರದ ನಂತರ ಸೇನೆ ಮತ್ತು ಅಸ್ಸಾಂ ರೈಫಲ್ಸ್ನಿಂದ ಪ್ರದೇಶದ ಮೇಲೆ ಪ್ರಾಬಲ್ಯ ಹೊಂದುವ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಭಾರತೀಯ ಸೇನೆ ಟ್ವೀಟ್ನಲ್ಲಿ ತಿಳಿಸಿದೆ.
ಮಣಿಪುರದಲ್ಲಿ ಒಂದು ತಿಂಗಳ ಹಿಂದೆ ಭುಗಿಲೆದ್ದ ಮೈತೆಯಿ ಮತ್ತು ಕುಕಿ ಸಮುದಾಯದ ಜನರ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 310 ಜನರು ಗಾಯಗೊಂಡಿದ್ದಾರೆ.