ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಪ್ರವಾಸಕ್ಕಾಗಿ ನ್ಯೂಯಾರ್ಕ್ ಗೆ ಬಂದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅನಿವಾಸಿ ಭಾರತೀಯರಿಂದ ವಿಶೇಷ ಸ್ವಾಗತ ಸಿಕ್ಕಿದೆ.
ಅನಿವಾಸಿ ಭಾರತೀಯ ಮಿನೇಶ್ ಸಿ ಪಟೇಲ್ ನೆಹರೂ ಅವರು ಜಾಕೆಟ್ ಮೇಲೆ ಮೋದಿಯವರ ಚಿತ್ರವನ್ನು ವಿಶೇಷವಾಗಿ ಮುದ್ರಿಸಿ ಧರಿಸಿದ್ದರು. ಮೋದಿ ಫೋಟೋ ಇರುವ ಜಾಕೆಟ್ 2015ರಲ್ಲಿ ಗುಜರಾತ್ ದಿನದಂದು ಮೋದಿಯವರ ಫೋಟೋ ಇರುವ ಜಾಕೆಟ್ ಅನ್ನು ವಿನ್ಯಾಸಗೊಳಿಸಲಾಗಿತ್ತು. ಪಟೇಲ್ ಬಳಿ ಮೋದಿ ಚಿತ್ರವಿರುವ 26 ಜಾಕೆಟ್ ಗಳಿವೆ ಎಂದು ಹೇಳಿದ್ದಾರೆ.
ನ್ಯೂಯಾರ್ಕ್ಗೆ ಆಗಮಿಸಿದ ಪ್ರಧಾನಿಯವರಿಗೆ ಅನಿವಾಸಿ ಭಾರತೀಯರು ಆತ್ಮೀಯ ಸ್ವಾಗತ ಕೋರಿದರು. ವಿಮಾನ ನಿಲ್ದಾಣದಲ್ಲಿ ಅನಿವಾಸಿ ಭಾರತೀಯರನ್ನು ನಗುಮೊಗದಿಂದ ಮಾತನಾಡಿಸಿದರು.