ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ವಿಶ್ವ ಯೋಗ ದಿನಾಚರಣೆ, ಈ ದಿನದ ಅಂಗವಾಗಿ ಪ್ರಧಾನಿ ಮೋದಿ ವಿಡಿಯೋ ಮೂಲದ ಸಂದೇಶವನ್ನು ಕಳುಹಿಸಿದ್ದಾರೆ. ಸದ್ಯ ಪ್ರಧಾನಿ ಮೋದಿ ಅಮೆರಿಕ ಪ್ರವಾಸದಲ್ಲಿದ್ದು, ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾದ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಯೋಗವು ಜಾಗತಿಕ ಆಂದೋಲನವಾಗಿದೆ, ಎಲ್ಲ ಗಡಿಗಳನ್ನು ಯೋಗ ದಾಟಿದ್ದು, ವಿಶ್ವದೆಲ್ಲೆಡೆ ಹರಡಿ, ಇಡೀ ಜಗತ್ತಿಗೆ ಯೋಗವೇ ಸ್ಫೂರ್ತಿ. ಸರ್ವರಿಗೂ ವಿಶ್ವ ಯೋಗ ದಿನಾಚರಣೆಯ ಶುಭ ಕೋರುತ್ತೇನೆ ಎಂದು ವಿಡಿಯೋ ಮುಖೇನ ಸಂದೇಶ ಕಳುಹಿಸಿದ್ದಾರೆ.
ಯೋಗದಿಂದ ಆರೋಗ್ಯ ವೃದ್ಧಿ ಸಾಧ್ಯವಿದೆ, ಪ್ರತಿಯೊಬ್ಬರೂ ಯೋಗ ಮಾಡಬೇಕು, ಯೋಗ ಮಾಡುವಂತೆ ಬೇರೆಯವರಿಗೆ ಪ್ರೇರೇಪಿಸಬೇಕು, ಇಂದು ಭಾರತದ ಆಹ್ವಾನದ ಮೇರೆಗೆ ೧೮೪ ದೇಶಗಳು ಯೋಗದಲ್ಲಿ ಭಾಗಿಯಾಗಲಿವೆ. ಆರೋಗ್ಯವೇ ಭಾಗ್ಯ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇಂದಿನಿಂದಲೇ ಯೋಗಾಭ್ಯಾಸ ಆರಂಭಿಸಿ ಎಂದಿದ್ದಾರೆ.