ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ರೆಂಡ್ ಬದಲಾದಂತೆ ಪ್ರತಿಯೊಬ್ಬರಲ್ಲೂ ಸೌಂದರ್ಯದ ಬಗ್ಗೆ ಆಸಕ್ತಿಯೂ ಹೆಚ್ಚಿದೆ..ಹಾಗಾಗಿ ಎಲ್ಲರೂ ಸುಂದರವಾಗಿ ಕಾಣಲು ಪ್ರಯತ್ನಿಸುತ್ತಾರೆ. ಸುಂದರವಾಗಿ ಕಾಣಬೇಕೆಂದರೆ ಪೌಷ್ಟಿಕ ಆಹಾರ ಸೇವನೆ ಅಗತ್ಯ. ನಮಗೆ ಕೆಲವು ರೀತಿಯ ಜ್ಯೂಸ್‌ಗಳು ಬಹಳಷ್ಟು ಸಹಾಯ ಮಾಡುತ್ತವೆ. ಈ ಕೆಳಗೆ ತಿಳಿಸಿರುವ ಯಾವುದಾದರೂ ಒಂದು ಜ್ಯೂಸ್ ಅನ್ನು ಪ್ರತಿನಿತ್ಯ ಕುಡಿದರೆ ಸಾಕು. ಒಂದು ತಿಂಗಳಲ್ಲಿ ಬದಲಾವಣೆಯನ್ನು ಕಾಣಬಹುದು.
ನೀವು ಬೀಟ್ರೂಟ್, ಬ್ಲೂಬೆರ್ರಿ ಮತ್ತು ಸ್ಟ್ರಾಬೆರಿಗಳೊಂದಿಗೆ ಜ್ಯೂಸ್ ತಯಾರಿಸಬಹುದು ಮತ್ತು ನಿಂಬೆ ರಸವೂ ಆರೋಗ್ಯಕ್ಕೂ ಒಳ್ಳೆಯದು. ಚರ್ಮಕ್ಕೆ ರಕ್ತ ಪೂರೈಕೆಯನ್ನು ಹೆಚ್ಚಿಸುತ್ತದೆ. ಕಲ್ಲಂಗಡಿ, ಪುದೀನ ಎಲೆಗಳ ರಸವನ್ನು ಅಥವಾ ಅನಾನಸ್ ಹಣ್ಣಿನ ರಸವನ್ನು ಸಹ ಕುಡಿಯಬಹುದು. ಈ ಜ್ಯೂಸ್‌ಗಳಲ್ಲಿ ಯಾವುದಾದರೂ ಒಂದನ್ನು ಪ್ರತಿದಿನ ಕುಡಿಯುವುದರಿಂದ, ನೀವು ಒಂದು ತಿಂಗಳೊಳಗೆ ಗಮನಾರ್ಹ ಬದಲಾವಣೆಯನ್ನು ಕಾಣುತ್ತೀರಿ.
ಇನ್ನೊಂದು ಜ್ಯೂಸ್..ಕ್ಯಾರೆಟ್, ಕಿತ್ತಳೆ, ಜ್ಯೂಸ್ ಮಾಡಿ ಕುಡಿಯಬಹುದು. ಕ್ಯಾರೆಟ್‌ನಲ್ಲಿರುವ ಬೀಟಾ ಕ್ಯಾರೋಟಿನ್ ನಮ್ಮ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಯಾಗುತ್ತದೆ. ಇದು ಚರ್ಮವನ್ನು ರಕ್ಷಿಸುತ್ತದೆ ಕಾಂತಿಯುತಾಗಿರುವಂತೆ ಮಾಡುತ್ತದೆ. ಕಿತ್ತಳೆಯಲ್ಲಿರುವ ವಿಟಮಿನ್ ಸಿ ಕೂಡ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಚರ್ಮವನ್ನು ಸುಕ್ಕುಗಳಿಂದ ಮುಕ್ತವಾಗಿಡುತ್ತದೆ. ಯಾವುದಾದುರೊಂದು ಜ್ಯೂಸ್ ಅನ್ನು ಪ್ರತಿದಿನ ಸೇವಿಸಿದರೆ ನೀವು ಯಂಗ್ ಮತ್ತು ಸುಂದರವಾಗಿ ಕಾಣುತ್ತೀರಿ.