ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಕಿಭಾಗ್ಯ ಜಾರಿಯಾಗುವ ಸಮಸ್ಯೆ ಒಂದೆಡೆಯಾದ್ರೆ ಇತ್ತ ಕರೆಂಟ್ ಬಿಲ್ ಹೆಚ್ಚು ಬರ್ತಿದೆ ಅನ್ನೋ ಸಮಸ್ಯೆ ಇನ್ನೊಂದು ಕಡೆಯಾಗಿದೆ.
ಪ್ರತಿ ತಿಂಗಳು ಸಾವಿರ ರೂಪಾಯಿ ಕರೆಂಟ್ ಬಿಲ್ ಕಟ್ಟುವವರಿಗೆ ಇದೀ ನಾಲ್ಕು ಸಾವಿರ ರೂಪಾಯಿವರೆಗೆ ಕರೆಂಟ್ ಬಿಲ್ ಬರುತ್ತಿದೆ. ನಿನ್ನೆಯಷ್ಟೇ ಎರಡು ಬಲ್ಬ್ ಹೊಂದಿನ ಶೆಡ್ ನಿವಾಸಿ ವೃದ್ಧೆ ಒಂದು ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿತ್ತು.
ಮೀಟರ್ ರೀಡಿಂಗ್ ಸಮಸ್ಯೆಗಳೂ ಕಾಣಿಸುತ್ತಿದೆ, ಈ ಮಧ್ಯೆ ನಿನ್ನೆ ಕೈಗಾರಿಕೋದ್ಯಮಿಗಳು ವಿದ್ಯುತ್ ಬಿಲ್ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕೈಗಾರಿಕೋದ್ಯಮಿಗಳ ಜತೆ ಇಂದು ಸಭೆ ನಡೆಸಲಿದ್ದಾರೆ.
ಇಂಧನ ಇಲಾಖೆ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಭಾಗಿಯಾಗಲಿದ್ದು, ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಯಲಿದೆ. ವಿದ್ಯುತ್ ದರ ಏರಿಕೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು, ಹೊಟೇಲ್ ಮಾಲೀಕರು ಎಲ್ಲ ಆಹಾರದ ಬೆಲೆ ಹೆಚ್ಚಳ ಮಾಡೋದಕ್ಕೆ ಮುಂದಾಗಿದ್ದಾರೆ.
ಈ ಸಭೆಯಲ್ಲಿ ವಿದ್ಯುತ್ ದರ ಏರಿಕೆಗೆ ಪರಿಹಾರ ಹುಡುಕುವ ಸಾಧ್ಯತೆಗಳಿವೆ, ವಿದ್ಯುತ್ ಬೆಲೆ ತಗ್ಗಿಸಲು ಯಾವೆಲ್ಲಾ ಮಾರ್ಗಗಳನ್ನು ಅನುಸರಿಸಬಹುದು ಎನ್ನುವ ಬಗ್ಗೆ ಮಾಹಿತಿ ನೀಡಲಿದ್ದಾರೆ. ಇಂದಿನ ಸಭೆ ಭಾರೀ ಮಹತ್ವದ್ದಾಗಿದ್ದು, ಏನಾಗುತ್ತದೆ ಕಾದುನೋಡಬೇಕಿದೆ.