ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ನಲ್ಲಿದ್ದಾರೆ ಎಂಬ ಗುಸುಗುಸು ಇವತ್ತಿನದಲ್ಲ, ಅವರಿಬ್ಬರ ಮೊದಲ ಸಿನಿಮಾದಿಂದಲೇ ಇದೆಲ್ಲಾ ಶುರುವಾಗಿದೆ. ಇಬ್ಬರೂ, ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ವದಂತಿಗಳಿಗೆ ಮತ್ತಷ್ಟು ಬಲವನ್ನು ನೀಡುತ್ತಿದೆ. ನಮ್ಮಿಬ್ಬರ ನಡುವೆ ಅಂಥದ್ದೇನೂ ಇಲ್ಲ ಎಂದು ಇಬ್ಬರೂ ಅಲ್ಲಗಳೆದಿದ್ದರೂ ಇತ್ತೀಚೆಗೆ ಕೆಫೆಯೊಂದರಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರುವುದು ಮತ್ತೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದರೊಂದಿಗೆ ಅಭಿಮಾನಿಗಳಲ್ಲಿ ಹೊಸ ಅನುಮಾನ ಶುರುವಾಗಿದೆ.
ಇತ್ತೀಚೆಗೆ ಇವರಿಬ್ಬರೂ ಕೆಫೆಯಲ್ಲಿ ಕಾಣಿಸಿಕೊಂಡಿದ್ದಾರೆ, ಆದ್ದರಿಂದ ಅವರು ಡೇಟಿಂಗ್ ಮಾಡುತ್ತಿದ್ದಾರೆಯೇ? ಎಂಬ ಅನುಮಾನಗಳ ಚರ್ಚೆ ಶುರುವಾಯಿತು. ಕೆಫೆಯಲ್ಲಿ ಇವರೊಂದಿಗೆ ನಿರ್ದೇಶಕ ಗೌತಮ್ ತಿನ್ನನೂರಿ, ಆನಂದ್ ದೇವರಕೊಂಡ ಮತ್ತು ಪೆರಿಯಾ ವರ್ಮ ಇದ್ದಾರೆ. ವಾಸ್ತವವಾಗಿ ರಶ್ಮಿಕಾ ವಿಜಯ್ ಅವರ ಕಿರಿಯ ಸಹೋದರ ಆನಂದ್ ದೇವರಕೊಂಡ ಅವರೊಂದಿಗೆ ಸ್ನೇಹಪರರಾಗಿದ್ದಾರೆ. ಅವರ ಪ್ರತಿ ಸಿನಿಮಾವನ್ನು ಪ್ರಚಾರ ಮಾಡುತ್ತಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಅವರ ಸಂಬಂಧದ ಬಗ್ಗೆ ವದಂತಿಗಳನ್ನು ಹುಟ್ಟುಹಾಕಿದೆ.