ಬ್ರಾಹ್ಮಣ ಮಹಾಸಭಾದ ಚಟುವಟಿಕೆಗಳಿಗೆ ಸರ್ಕಾರದಿಂದ ಅನುದಾನದ ನೆರವು: ವಿಪ್ರ ಶಾಸಕರ ಭರವಸೆ

ಹೊಸ ದಿಗಂತ ವರದಿ, ಬೆಂಗಳೂರು:

ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚಟುವಟಿಕೆಗಳಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ರೀತಿಯ ನೆರವು ಒದಗಿಸಲು ಶ್ರಮಿಸುವುದಾಗಿ ವಿಪ್ರ ಶಾಸಕರು ಘೋಷಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಶನಿವಾರ ಬಸವನಗುಡಿಯ ಎಪಿಎಸ್ ಕಾಲೇಜು ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ ದೇಶಪಾಂಡೆಯವರೂ ಸೇರಿದಂತೆ ಭಾಗವಹಿಸಿದ್ದ ಸಮುದಾಯದ ಎಲ್ಲ ಶಾಸಕರು ಮಹಾಸಭಾ ದ ಚಟುವಟಿಕೆಗಳಿಗೆ ಸರ್ಕಾರದಿಂದ ಅನುದಾನದ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಚಿವ ಆರ್.ವಿ.ದೇಪಾಂಡೆ, ಶಾಸಕರಾದ ಸಿ.ಕೆ.ರಾಮಮೂರ್ತಿ, ಉದಯ ಗರುಡಾಚಾರ್, ವಿಕಾಸ್ ವೈದ್ಯ, ಶ್ರೀವತ್ಸ, ಹಾಗೂ ರವಿ ಸುಬ್ರಹ್ಮಣ್ಯ ಸೇರಿದಂತೆ ನೂತನವಾಗಿ ಆಯ್ಕೆಯಾದ ಸಮುದಾಯದ ಶಾಸಕರನ್ನು ಮಹಾಸಭಾ ವತಿಯಿಂದ ಸನ್ಮಾನಿಸಲಾಯಿತು.

ದೇಶಪಾಂಡೆ ಪ್ರಶಂಸೆ : ಬ್ರಾಹ್ಮಣ ಮಹಾಸಭಾ ಚಟುವಟಿಕೆಗಳು ಸಾಮಾಜಿಕವಾಗಿ ಹೊಸರೂಪು ಪಡೆದು ಕ್ರಿಯಾಶೀಲವಾಗಲು ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿಯವರ ನಾಯಕತ್ವವೇ ಕಾರಣ ಎಂದು ಆರ್.ವಿ. ದೇಶಪಾಂಡೆ ಪ್ರಶಂಶಿಸಿದರು. ಈ ಹಿಂದೆ ಬ್ರಾಹ್ಮಣ ಮಂಡಳಿ ರಚನೆ ಸಂದರ್ಭದಲ್ಲಿ ತಾವು ಪಟ್ಟ ಶ್ರಮವನ್ನು ನೆನಪು ಮಾಡಿಕೊಟ್ಟರು.

ಸಚಿವ ದಿನೇಶ್ ಭರವಸೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಸಂಘಟನೆ ವಿಚಾರದಲ್ಲಿ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿಯವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದರು.

ನಮ್ಮಸರ್ಕಾರ ಬ್ರಾಹ್ಮಣ ಸಮಾಜದ ಹಿಂದಿದೆ ಎಂದು ಬರವಸೆ ನೀಡಿದ ಅವರು ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಆಶ್ವಾಸನೆ ನೀಡಿದ್ದ ಅನುದಾನವನ್ನು ಈಗ ಬಿಡುಗಡೆ ಮಾಡಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಗೋ ಹತ್ಯೆ ನಿಷೇಧಿಸಿ : ಮಹಾಸಭಾ ಅಶೋಕ ಹಾರನಹಳ್ಳಿಯವರು ಮಾತನಾಡಿ, ಅರ್ಹತೆ ಆಧಾರಧ ಮೇಲೆ ಆರ್ ವಿ. ದೇಶಪಾಂಡೆ ಯವರು ಮುಖ್ಯ ಮಂತ್ರಿ‌ಆಗಬೇಕಿತ್ತು.ಮುಂದಿನ‌ ದಿನಗಳಲ್ಲಿ ಅವರಿಗೂ ಒಳ್ಳೆಯ ಅವಕಾಶಗಳು ಒದಗಿ ಬರಲಿ ಎಂದು ಹಾರೈಸಿದರು.

ಬ್ರಾಹ್ಮಣರು ಎಂದಿಗೂ ಜಾತಿ ರಾಜಕಾರಣ ಮಾಡಿದವರಲ್ಲ. ಆದರೆ ಬಲಾತ್ಕಾರ ಮತಾಂತರ ತಡೆಯುವುದು ಗೋ ಹತ್ಯೆ ನಿಷೇಧ ಸೇರಿದಂತೆ ಧರ್ಮ ರಕ್ಷಣೆ ಮಾಡುವ ನಿಟ್ಟಿನಲ್ಲಿ ಈಗಿನ ಸರ್ಕಾರ ಚಿಂತನೆ ಮಾಡಬೇಕು ಎಂದೂ ಒತ್ತಾಯಿಸಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಆಶೀರ್ವಚನ ನೀಡಿ ತ್ರಿಮತಾಚಾರ್ಯರೂ ಸಮಾಜಕ್ಕೆ ಧರ್ಮದ ಸಂದೇಶ ನೀಡಿ ಸನ್ಮಾರ್ಗದಲ್ಲಿ ನಡೆಯುವಂತೆ ಬೋಧಿಸಿದರು ಈ ಸಂದೇಶವನ್ನು ಪಾಲಿಸಬೇಕಾದ ಅವಶ್ಯಕತೆ ಇದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!