ದಿನಭವಿಷ್ಯ| ರಗಳೆಗಳಿಲ್ಲದೆ ದಿನ ಕಳೆಯುವ ನಿಮ್ಮ ಉದ್ದೇಶ ಈಡೇರದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಸರಿಯಾದ ಯೋಜನೆ ಹಾಕಿಕೊಂಡರೆ ನಿಮ್ಮ ಕಾರ್ಯವೆಲ್ಲ ಸುಗಮ. ಅಡ್ಡಿಗಳ ನಿವಾರಣೆ. ಆರ್ಥಿಕ ಸ್ಥಿತಿ ಸುಧಾರಣೆ. ಬಂಧುಬಳಗದ ಜತೆ ಬೆರೆಯವ ಅವಕಾಶ.

ವೃಷಭ
ಸಮತೋಲಿತ ಮನಸ್ಥಿತಿ ಇಂದು ನಿಮ್ಮದು. ಹಾಗಾಗಿ ಯಾವುದೇ ವಿಷಯ ನಿಮ್ಮ ಮನಸ್ಸು ಕೆಡಿಸದು. ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವಿರಿ.

ಮಿಥುನ
ರಗಳೆಗಳಿಲ್ಲದೆ ದಿನ ಕಳೆಯುವ ನಿಮ್ಮ ಉದ್ದೇಶ ಈಡೇರದು. ಏನಾದರೊಂದು ಕಿರಿಕಿರಿ ಬಾಧಿಸುವುದು. ಕಾರ್ಯ ಸಾಧಿಸುವಲ್ಲಿ ಧೈರ್ಯ ತೋರಬೇಕು.

ಕಟಕ
ನಿಮ್ಮ ಕಾರ್ಯದಲ್ಲಿ  ತಪ್ಪೆಸಗಬೇಡಿ. ಅದನ್ನು ಸರಿಪಡಿಸುವುದು ಕಷ್ಟವಾದೀತು. ಆರ್ಥಿಕ ವಿಷಯದಲ್ಲಿ ಪ್ರಮುಖ ನಿರ್ಧಾರ ತಾಳಬೇಕಾದ ಅನಿವಾರ್ಯತೆ.

ಸಿಂಹ
ಆಪ್ತ ಬಂಧುಗಳ ಜತೆ ಸಮಾಲೋಚನೆ ನಡೆಸುವ ಅವಕಾಶ. ಭಿನ್ನಾಭಿಪ್ರಾಯ ತೊಡೆಯಲು ಸಕಾಲ. ಶಾಂತ ಮನಸ್ಥಿತಿಯಿಂದ ವ್ಯವಹರಿಸಿ

ಕನ್ಯಾ
ಹೆಚ್ಚು ಹೊಣೆಗಾರಿಕೆ ನಿಭಾಯಿಸಬೇಕಾದ ದಿನ. ಎಲ್ಲರೂ ನಿಮ್ಮನ್ನೆ ಅವಲಂಬಿಸುತ್ತಾರೆ. ಆಹಾರದಲ್ಲಿ ಹಿತಮಿತ ಸಾಧಿಸಿ. ಇಲ್ಲವಾದರೆ ಹೊಟ್ಟೆ ಕೆಡಬಹುದು.

ತುಲಾ
ಕೌಟುಂಬಿಕ ಹೊಣೆ ಹೆಚ್ಚಳ. ಕುಟುಂಬ ಸದಸ್ಯರ ಅಸಹಕಾರ ಎದುರಿಸುವಿರಿ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಮೊಳೆಯಬಹುದು.

ವೃಶ್ಚಿಕ
ಹಣದ ಹರಿವಿನಲ್ಲಿ ತೊಡಕಾಗದು. ಹಾಗಾಗಿ ನಿಮ್ಮ ಖರೀದಿಯ ಉತ್ಸಾಹಕ್ಕೆ ತಡೆಯಿಲ್ಲ. ಪ್ರೀತಿಪಾತ್ರರ ಭಾವನೆ, ಬೇಡಿಕೆಗಳಿಗೆ ಗಮನ ನೀಡುವುದೊಳಿತು.

ಧನು
ಹೆಚ್ಚು ಬದ್ಧತೆಯಿಂದ, ನಿಷ್ಠೆಯಿಂದ ಕೆಲಸ ಮಾಡುವಿರಿ. ಹರಿತ ವಸ್ತುಗಳ ಜತೆ ವ್ಯವಹರಿಸುವಾಗ ಜಾಗ್ರತೆ ವಹಿಸಿ. ಗಾಯದ ಸಾಧ್ಯತೆ.

ಮಕರ
ಗುರಿ ಸಾಧನೆ ನಿಮಗೆ ಕಷ್ಟವಲ್ಲ. ಆದರೆ ಬದ್ಧತೆಯ ಕೊರತೆಯಿಂದ ಹಿನ್ನಡೆ ಎದುರಿಸುವಿರಿ. ಹಿಡಿದ ಕೆಲಸ ಅರ್ಧಕ್ಕೆ ಬಿಟ್ಟುಬಿಡಬೇಡಿ.

ಕುಂಭ
ನಿಮ್ಮ ಪಾಲಿಗಿಂದು ಪ್ರಗತಿಯ ದಿನ. ಎಲ್ಲ ವಿಷಯಗಳಲ್ಲಿ ಉನ್ನತಿ ಸಾಧಿಸುವಿರಿ. ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಿರಿ.

ಮೀನ
ಇತರರೊಂದಿಗೆ ವ್ಯವಹರಿಸುವಾಗ ನಿಮ್ಮ ನಡೆನುಡಿ ತಪ್ಪರ್ಥ ಮೂಡಿಸದಂತೆ ಎಚ್ಚರ ವಹಿಸಿ. ಸಂಬಂಧ ಕೆಡದಂತೆ ನೋಡಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!