SHOCKING| ಲಾರಿಗೆ ರೈಲ್ವೆ ವಿದ್ಯುತ್ ತಂತಿ ತಗುಲಿ ಅಗ್ನಿ ಅನಾಹುತ! 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲಾರಿಯೊಂದು ಹೈಟೆನ್ಷನ್ ರೈಲ್ವೆ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದು ಅಗ್ನಿ ಅನಾಹುತ ಸಂಭವಿಸಿದ ಘಟನೆ ಛತ್ತೀಸ್‌ಘಡದಲ್ಲಿ ನಡೆದಿದೆ. ರಾಜ್ಯದ ಸಕ್ರೇಲಿ ಗೇಟ್ ಬಳಿ ಮಧ್ಯರಾತ್ರಿ ದುರಂತ ನಡೆದಿದ್ದು, ನಡೆದ ಘಟನೆ ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ.

ಓವರ್‌ಲೋಡ್‌ನೊಂದಿಗೆ ಬರುತ್ತಿದ್ದ ಲಾರಿಗೆ ರೈಲ್ವೇ ಓವರ್‌ಹೆಡ್ ಉಪಕರಣದ ತಂತಿ ಸ್ಪರ್ಶಿಸಿತು. ಇದರಿಂದಾಗಿ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಅಪಘಾತದಿಂದಾಗಿ (ಮುಂಬೈ ಹೌರಾ ರೈಲು ಮಾರ್ಗ) ರೈಲುಗಳು ಮತ್ತು ವಾಹನ ಸಂಚಾರ ರಾಷ್ಟ್ರೀಯ ಹೆದ್ದಾರಿಯಲ್ಲಿ 49 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತು.

ಬೆಂಕಿ ನಂದಿಸಿ ಜೆಸಿಬಿ ಮೂಲಕ ಲಾರಿಯನ್ನು ಹೊರತೆಗೆದ ನಂತರವೇ ವಾಹನ ಸಂಚಾರ ಪುನರಾರಂಭವಾಯಿತು. ಈ ಅಪಘಾತದಿಂದಾಗಿ ಆಜಾದ್ ಹಿಂದ್ ಎಕ್ಸ್‌ಪ್ರೆಸ್ ಬರದ್ವಾರ ನಿಲ್ದಾಣದಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡಿತ್ತು. ಜನಶತಾಬ್ದಿ ಮತ್ತು ಇತರ ಪ್ಯಾಸೆಂಜರ್ ರೈಲುಗಳು ಚಂಪಾ ಮತ್ತು ಶಕ್ತಿ ನಿಲ್ದಾಣಗಳಲ್ಲಿ ನಿಂತಿದ್ದವು. 49 ಗಂಟೆಗಳ ನಂತರ ರೈಲುಗಳು ಎಂದಿನಂತೆ ಸಂಚರಿಸಿದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!