ದಿನಭವಿಷ್ಯ| ನಿಮ್ಮ ಹಣದ ಸಮಸ್ಯೆಗೆ ಇಂದು ಪರಿಹಾರ ಸಿಕ್ಕೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ದಿನವಿಡೀ ಒಂದಿಲ್ಲೊಂದು ಕೆಲಸದಲ್ಲಿ ಮಗ್ನ. ಹಾಗಾಗಿ ವಿರಾಮ ಪಡೆಯಲು ಅವಕಾಶ ಸಿಗಲಾರದು. ಬಂಧುಗಳ ಕಿರಿಕಿರಿ ಸಂಭವ.

ವೃಷಭ
ಮಾತು ಮನೆ ಕೆಡಿಸಬಹುದು ಎಂಬುದು ನೆನಪಿಡಿ. ನಿಮ್ಮ ಹದ ತಪ್ಪಿದ ಮಾತು ಸಂಬಂಧ ಕೆಡಿಸಬಹುದು. ಸಂಘರ್ಷ ಹುಟ್ಟು ಹಾಕಬಹುದು.

ಮಿಥುನ
ನಿಮ್ಮ ಜೀವನಶೈಲಿ, ಕೆಲವು ಚಿಂತನೆ ಬದಲಿಸಿಕೊಳ್ಳಬೇಕಾದ ಅಗತ್ಯ ಬರುವುದು. ಎಷ್ಟಿದ್ದರೂ ಜೀವನ ಎಂಬುದು ಹೊಂದಾಣಿಕೆಯಲ್ಲವೆ.

ಕಟಕ
ಕೆರಿಯರ್‌ನಲ್ಲಿ ಉನ್ನತಿ ಕಾಣುವಿರಿ. ಜೀವನ ಸಂಗಾತಿಯ ಆಯ್ಕೆ ಸಫಲತೆ ಕಾಣುವುದು. ಆರೋಗ್ಯದ ವಿಷಯದಲ್ಲಿ ತುಸು ಎಚ್ಚರಿಕೆ ವಹಿಸಬೇಕು.

ಸಿಂಹ
ನಿಮ್ಮ ಸುತ್ತಲಿನ ವ್ಯಕ್ತಿಗಳ ಜತೆ ಮಾತಿನ ಚಕಮಕಿ ತಪ್ಪಿಸಿ. ಎಂತಹುದೇ ಸಂದರ್ಭ ಬಂದರೂ ರೇಗದಿರಿ. ಕೌಟುಂಬಿಕ ಪರಿಸರ ಅಸಹನೀಯ ಎನಿಸೀತು.

ಕನ್ಯಾ
ಹಣದ ವಿಚಾರದಲ್ಲಿ ಉಂಟಾಗಿದ್ದ ತೊಡಕು ಇಂದು ನಿವಾರಣೆ ಆಗಲಿದೆ. ಹಾಗಾಗಿ ಉಳಿದೆಲ್ಲ ಕೆಲಸಗಳು ಸುಸೂತ್ರವಾಗಿ ನಡೆಯಲಿವೆ.

ತುಲಾ
ಕೌಟುಂಬಿಕ ಸಮಸ್ಯೆ ಕಾಡುವುದು. ಅದರ ಪರಿಹಾರಕ್ಕೆ ತಿಣುಕಾಡುವಿರಿ. ಎಲ್ಲರ ಸಹಕಾರ ಪಡೆದು ಮುಂದುವರಿಯಿರಿ. ಮಿತಾಹಾರ ಸೇವಿಸಿ.

ವೃಶ್ಚಿಕ
ಕುಟುಂಬಸ್ಥರ ವಿಷಯದಲ್ಲಿ ಹೆಚ್ಚು ಸಂವೇದನೆಯಿಂದ ವರ್ತಿಸಿ. ಅವರನ್ನು ಕಡೆಗಣಿಸಿದ ಭಾವ ಬರದಿರಲಿ. ಮಿತವ್ಯಯ ಸಾಧಿಸಿರಿ.

ಧನು
ಇತರರ ಮೇಲೆ ನಿಮ್ಮ ನಿಲುವು ಹೇರಬೇಡಿ. ಅವರ ಅಭಿಪ್ರಾಯಕ್ಕೂ ಕಿವಿಗೊಡಿ. ಬಂಧುಗಳ ಜತೆ ಪರಸ್ಪರ ವಿಶ್ವಾಸ ಮುಖ್ಯ. ಅಪನಂಬಿಕೆ ತರವಲ್ಲ.

ಮಕರ
ನಿಮಗೆ ಸಲಹೆ ನೀಡುವವರು ಹಲವರಿದ್ದಾರೆ. ಆದರೆ ಸಕ್ರಿಯ ನೆರವಿಗೆ ಬರಲಾರರು. ನಿಮ್ಮ ಸಮಸ್ಯೆ ನೀವೇ ಬಗೆಹರಿಸಬೇಕು.

ಕುಂಭ
ಕೆಲವು ಒತ್ತಡದಿಂದ ನಿದ್ರಾಹೀನತೆ ಬಾಧಿಸಬಹುದು. ಶಾಂತ ಮನಸ್ಥಿತಿ ಬೆಳೆಸಿಕೊಳ್ಳಲು ಯತ್ನಿಸಿ. ಮಕ್ಕಳ ಅಧ್ಯಯನಕ್ಕೆ ಹೆಚ್ಚು ಗಮನ ಕೊಡಿ.

ಮೀನ
ದೈಹಿಕ ಸಮಸ್ಯೆ ಕಾಡುತ್ತಿದ್ದರೆ ಇಂದು ಪರಿಹಾರ ಕಾಣಲಿದೆ. ಪ್ರಮುಖ ವ್ಯಕ್ತಿಗಳ ಸಂಪರ್ಕ ಸಾಧಿಸಿರಿ. ನಿಮ್ಮ ಕಾರ್ಯಕ್ಕೆ ನೆರವಿಗೆ ಬಂದಾರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!