ಮ್ಯಾಂಗೊ ಜೆಲ್ಲಿ ಸವಿಯಲು ತುಂಬಾ ರುಚಿಕರ. ಸಿಂಪಲ್ಲಾಗಿ ಮನೆಯಲ್ಲಿಯೇ ಮ್ಯಾಂಗೋ ಜೆಲ್ಲಿ ಮಾಡಬಹುದು. ಅದು ಹೇಗೆ ಅಂತೀರಾ… ಇಲ್ಲಿದೆ ರೆಸಿಪಿ.
ಬೇಕಾಗುವ ಸಾಮಾಗ್ರಿ:
ಮಾವಿನ ಹಣ್ಣಿನ ರಸ ಅರ್ಧಕಪ್
ಸಕ್ಕರೆ ಒಂದುಕಪ್
ಕಾರ್ನ್ ಫ್ಲೋರ್ ಒಂದು ಟೀ ಸ್ಪೂನ್
ಶುದ್ಧ ತುಪ್ಪ 1 ಟೀಸ್ಪೂನ್
ಮಾಡುವ ವಿಧಾನ:
ಅರ್ಧ ಕಪ್ ನೀರಿನಲ್ಲಿ ಕಾರ್ನ್ ಫ್ಲೋರ್ ಸೇರಿಸಿ ಕಲಸಿಟ್ಟುಕೊಳ್ಳಿ.
ಇದಕ್ಕೆ ಮಾವಿನ ಹಣ್ಣಿನ ರಸವನ್ನು ಸೇರಿಸಿ ಮಿಕ್ಸ್ ಮಾಡಿ.
ಬಾಣಲೆಯನ್ನು ಸಣ್ಣ ಉರಿಯಲ್ಲಿಡಿ.
ಒಂದು ಕಪ್ ನೀರು ಹಾಕಿ, ನಂತರ ಒಂದು ಕಪ್ ಸಕ್ಕರೆ ಹಾಕಿ ಸಕ್ಕರೆ ಪೂರ್ಣ ಪ್ರಮಾಣದಲ್ಲಿ ಕರಗಿದಾಗ ನೊರೆಯಾಗಲಾರಂಭಿಸುತ್ತದೆ.
ಈ ಹಂತದಲ್ಲಿ ಮಾವಿನ ರಸದ ಮಿಶ್ರಣವನ್ನು ಸುರಿಯಿರಿ.
ತುಪ್ಪ ಸೇರಿಸಿ ಕದಡಿ. ಮಿಶ್ರಣ ತಳ ಬಿಡುವಾಗ ಸ್ಟೀಲ್ ತಟ್ಟೆಗೆ ಒಂದು ಟೀ ಸ್ಪೂನ್ ತುಪ್ಪ ಹಚ್ಚಿ ಮಿಶ್ರಣವನ್ನು ತಟ್ಟೆಗೆ ಸುರಿಯಿರಿ.
ತಣಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ, ತಿನ್ನಲು ಕೊಡಿ. ರುಚಿ ರುಚಿಯಾದ ಮ್ಯಾಂಗೋ ಜೆಲ್ಲಿ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ.