SPORTS | ಸ್ಯಾಫ್ ಚಾಂಪಿಯನ್‌ಶಿಪ್: ಕುವೈತ್ ಮಣಿಸಿ ಟ್ರೋಫಿಗೆ ಮುತ್ತಿಟ್ಟ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಫ್ ಚಾಂಪಿಯನ್ಸ್ ಫೈನಲ್ ಪಂದ್ಯದಲ್ಲಿ ಕುವೈತ್‌ನ್ನು ಸೋಲಿಸಿ ಭಾರತ ಗೆಲುವಿನ ಟ್ರೋಫಿಗೆ ಮುತ್ತಿಕ್ಕಿದೆ.

ಸತತವಾಗಿ ಒಂಬತ್ತನೇ ಬಾರಿ ಗೆಲುವು ಸಾಧಿಸಿದ ಹಿರಿಮೆ ಭಾರತ ತಂಡದ್ದಾಗಿದೆ. ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆದಿದ್ದು, ಕಡೆಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಕುವೈತ್ ತಂಡವನ್ನು ಬ್ಲ್ಯೂಟೈಗರ್ಸ್ ಸೋಲಿಸಿದೆ.

ನಿಗದಿತ ಅವಧಿಯಲ್ಲಿ ಎರಡೂ ತಂಡಗಳು 1-1ಗೋಲು ಕಂಡಿದ್ದವು. ಫಲಿತಾಂಶ ನಿರ್ಣಯಕ್ಕಾಗಿ ಪೆನಾಲ್ಟಿ ಶೂಟೌಟ್ ನಡೆದಿದ್ದು, 5-4 ಅಂತರದಲ್ಲಿ ಭಾರತ ಗೆಲುವುದು ಕಂಡಿದೆ. ಇದರೊಂದಿಗೆ ಸತತವಾಗಿ 9ನೇ ಬಾರಿಗೆ ಟ್ರೋಫಿ ಭಾರತಕ್ಕೆ ದೊರಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!