ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನವನ್ನು ಹಾರಿಸುವುದು ಮಕ್ಕಳ ಆಟವಲ್ಲ. ನೂರಾರು ಪ್ರಯಾಣಿಕರ ಜೀವನ ಒಬ್ಬ ಪೈಲಟ್ ಮೇಲೆ ಅವಲಂಬಿತವಾಗಿದೆ. ಒಂದು ಸಣ್ಣ ತಪ್ಪಾದರೂ ಪ್ರಾಣ ಕಳೆದುಕೊಳ್ಳುತ್ತಿದ್ದು, ಸಣ್ಣ ತಪ್ಪಿಗೂ ಅವಕಾಶವಿಲ್ಲದಂತೆ ಮುಂಜಾಗ್ರತೆ ವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಂಗತಿಗಳು ಹಲವು ಬಾರಿ ಕಾಣಸಿಗುತ್ತವೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮೇಲ್ಸೇತುವೆಯ ಕೆಳಗೆ ವಿಮಾನ ಹಾರುತ್ತಿರುವುದನ್ನು ಕಾಣಬಹುದು. ಈ ವೇಳೆ ಮೇಲ್ಸೇತುವೆ ಮೇಲೆ ನೂರಾರು ವಾಹನಗಳು ಸಂಚರಿಸುತ್ತಿವೆ. ಸ್ವಲ್ಪ ಹೆಚ್ಚು ಕಡಿಮೆ ಆದರೂ ವಿಮಾನ ಕಂಬಕ್ಕೆ ಅಪ್ಪಳಿಸಿದ್ದರೆ ಏನಾಗುತ್ತಿತ್ತು ಎಂದು ಊಹಿಸಿಕೊಳ್ಳಿ. ಕೆಲವು ಬಳಕೆದಾರರು ಈ ವೀಡಿಯೊವನ್ನು ನೋಡಿದ ನಂತರ ಅದನ್ನು ನಕಲಿ ಎಂದು ಕೂಡ ಕರೆದಿದ್ದಾರೆ. ಈ ವಿಡಿಯೋದಲ್ಲಿ ತೋರಿಸಿರುವ ದೃಶ್ಯ ಸ್ವಲ್ಪವೂ ನಿಜವಲ್ಲ ಎನ್ನಲಾಗಿದ್ದು, ಅದನ್ನು ಎಡಿಟ್ ಮಾಡಲಾಗಿದೆ ಎಂಬ ಕಮೆಂಟ್‌ಗಳು ಓಡಾಡುತ್ತಿವೆ.
Instagram ನಲ್ಲಿ the_.amritsar ID ಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಮಾನದ ಪೈಲಟ್ ಉತ್ತಮ ಕೆಲಸ ಮಾಡಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ. ಇದುವರೆಗೆ ಈ ವಿಡಿಯೋವನ್ನು 45 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 8 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಕೆಲವರು ಇದನ್ನು ‘ಇದೊಂದು ಅದ್ಭುತ ವಿಎಫ್‌ಎಕ್ಸ್’ ಎಂದರೆ, ಇನ್ನೂ ಕೆಲವರು ಇದು ಗ್ರಾಫಿಕ್ಸ್ ಅಲ್ಲ ನಿಜವಾದ ಘಟನೆ ಎನ್ನುತ್ತಿದ್ದಾರೆ.