ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನಲ್ಲಿ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಇತಿಹಾಸ ಪ್ರಸಿದ್ಧ ಶ್ರೀ ಮಧೂರಿನ ಮದಮಂತೇಶ್ವರ ದೇಗುಲದ ಆವರಣದಲ್ಲಿ ನೀರು ತುಂಬಿದ್ದು, ದೇವಸ್ಥಾನಕ್ಕೆ ಜಲದಿಗ್ಭಂದನ ಹಾಕಿದಂತೆ ಕಾಣಿಸುತ್ತಿದೆ. ದೇಗುಲದ ಪಕ್ಕದಲ್ಲಿಯೇ ಮಧುವಾಹಿನಿ ಹೊಳೆ ತುಂಬಿ ಹರಿಯುತ್ತಿದ್ದು, ಹೊಳೆಯಿಂದ ನೀರು ದೇಗುಲದ ಆವರಣಕ್ಕೆ ಬಂದಿದೆ. ದೇಗುಲದ ಹೊರಭಾಗದಲ್ಲಿ ನೀರು ತುಂಬಿದ್ದು, ನೀರಿನಲ್ಲಿಯೂ ಭಕ್ತರು ದೇವರ ದರುಶನಕ್ಕೆ ಆಗಮಿಸಿದ್ದಾರೆ.