ಪುತ್ತೂರಿನ ಪಡಿಲು ಬಳಿ ರಸ್ತೆ ಕುಸಿತ, ಓಡಾಟಕ್ಕೆ ಅಡ್ಡಿ

ಹೊಸದಿಗಂತ ವರದಿ ಪುತ್ತೂರು:

ಪುತ್ತೂರು – ಉಪ್ಪಿನಂಗಡಿ ರಸ್ತೆಯ ಪಡಿಲು ಎ.ಪಿ.ಎಂ.ಸಿ. ರಸ್ತೆ ಕ್ರಾಸ್ ಬಳಿ ರಸ್ತೆಯ ಒಂದು ಪಾರ್ಶ್ವ ಕುಸಿದು ಜನರ ಓಡಾಟಕ್ಕೆ ಅಡ್ಡಿಯಾಗಿದೆ.

ನಗರಸಭೆಯ ಜಲಸಿರಿ ಯೋಜನೆಯಡಿ ಪೈಪ್ಲೈನ್ ಹಾಕುವ ಕಾಮಗಾರಿಯಲ್ಲಿ ಹೊಂಡಕ್ಕೆ ಸರಿಯಾಗಿ ಮಣ್ಣು ತುಂಬಿಸಿದೆ ರಸ್ತೆ ಕುಸಿತ ಉಂಟಾಗಿದೆ. ಪಡಿಲು ಎ.ಪಿ.ಎಂ.ಸಿ. ರಿಕ್ಷಾ ಪಾರ್ಕ್ ಮಾಡುವ ಜಾಗ ಇದಾಗಿದ್ದು, ಇದರಿಂದ ರಿಕ್ಷಾ ನಿಲುಗಡೆಗೆ ತೀವ್ರ ಅಡಚಣೆ ಉಂಟಾಗಿದೆ.

ಸಂಪೂರ್ಣ ಭೂ ಕುಸಿತ ಗೊಳ್ಳುವ ಮೊದಲೇ ಸಂಬಂಧಪಟ್ಟ ಇಲಾಖೆ ಕೂಡಲೇ ತುರ್ತು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!