ಸ್ಟಂಟ್ ಮಾಡಿದ ಯುವಕ ಅರೆಸ್ಟ್:‌ ಪ್ರಾಣವನ್ನು ನಿರ್ಲಕ್ಷಿಸದಂತೆ ಆರ್‌ಪಿಎಫ್‌ ಟ್ವೀಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಅನೇಕರು ಮಾಡುವ ತಂತ್ರಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಸಾರ್ವಜನಿಕ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ವೀಡಿಯೊಗಳನ್ನು ಮಾಡುವ ಮೂಲಕ ಅಪಾಯವನ್ನು ಮೈಮೇಲೆಳೆದುಕೊಳ್ಳುತ್ತಾರೆ. ಅದರಲ್ಲೂ ರೈಲ್ವೇ ನಿಲ್ದಾಣ, ರೈಲುಗಳಲ್ಲಿ ವಿಡಿಯೋ, ರೀಲ್ ಗಳನ್ನು ನಿಷೇಧಿಸಿದ್ದರೂ ಯುವಕರು ಕಿವಿಗೊಡುತ್ತಿಲ್ಲ. ಬಿಹಾರದ ರೈಲ್ವೇ ಪ್ಲಾಟ್‌ಫಾರ್ಮ್ ಮೇಲೆ ಸ್ಟಂಟ್ಸ್ ಸಾಹಸ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರ ರೈಲ್ವೆಯ ಪ್ಲಾಟ್‌ಫಾರ್ಮ್‌ನಲ್ಲಿ ರೈಲು ನಿಂತಿದ್ದು, ಈ ವೇಳೆ ಯುವಕನೊಬ್ಬ ಒಮ್ಮಿಂದೊಮ್ಮೆಲೆ ಪಲ್ಟಿ ಹೊಡೆದಿದ್ದಾನೆ. ಈತನ ಪ್ರದರ್ಶನ ಕಂಡು ಪ್ರಯಾಣಿಕರು ಬೆರಗಾದರು. ಈ ವಿಡಿಯೋವನ್ನು ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಹಂಚಿಕೊಂಡಿದ್ದಾರೆ. ಮಾನ್‌ಪುರ ಜಂಕ್ಷನ್‌ನಲ್ಲಿ ಯುವಕನೊಬ್ಬ ವೈರಲ್ ಆಗಲು ಸಾಹಸ ಮಾಡಿದ್ದು, ಉಲ್ಲಂಘನೆಯಿಂದಾಗಿ ಬಂಧಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ಶೇರ್‌ಗಳಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುವವರಿಗೆ ಇದು ಪಾಠವಾಗಲಿದೆ ಎಂದು ನಾವು ಭಾವಿಸುತ್ತೇವೆ’ ಎಂದು ಅವರು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!