ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮ್ಯಾಟೊ ರೇಟ್ ಏಕಾಏಕಿ ಹೆಚ್ಚಾಗಿದ್ದು, ಟೊಮ್ಯಾಟೊ ಕಳ್ಳರು ಜಾಸ್ತಿಯಾಗಿದ್ದಾರೆ. ಚಿನ್ನ ಬೆಳ್ಳಿ ಬಿಟ್ಟು ಕಳ್ಳರು ಟೊಮ್ಯಾಟೊ ಕಳ್ಳತನಕ್ಕೆ ಮುಂದಾಗಿದ್ದು, ಟೊಮ್ಯಾಟೊ ಕಾಯೋದು ದೊಡ್ಡ ತಲೆನೋವಾಗಿದೆ.
ಕೋಲಾರದಲ್ಲಿ ಏಷ್ಯಾದ ಅತಿದೊಡ್ಡ ಟೊಮ್ಯಾಟೊ ಮಾರ್ಕೆಟ್ ಇದೆ. ಇಲ್ಲಿ ಪೊಲೀಸರು ಟೊಮ್ಯಾಟೊ ಕಾವಲಿದ್ದಾರೆ. 24 ಗಂಟೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಇಷ್ಟೇ ಅಲ್ಲದೆ ಸಿಸಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ.
15 ಕೆಜಿ ಟೊಮ್ಯಾಟೊ ಬೆಲೆ ಎರಡು ಸಾವಿರ ರೂಪಾಯಿಗಳಾಗಿದ್ದು, ಟೊಮ್ಯಾಟೊಗೆ ಹಿಂದೆಂದೂ ಇರದಂಥ ಡಿಮ್ಯಾಂಡ್ ಸಿಕ್ಕಿದೆ.