VIRAL VIDEO| ಹೈಟೆಕ್ ಭಿಕ್ಷಾಟನೆ: ವಿಮಾನದಲ್ಲಿ ಹಣ ಬೇಡುತ್ತಿರುವ ವ್ಯಕ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಜನರು ಭಿಕ್ಷೆ ಬೇಡುವುದನ್ನು ನೋಡಿದ್ದೇವೆ. ಆದರೆ, ಈಗ ವಿಮಾನದಲ್ಲೂ ಭಿಕ್ಷಾಟನೆ ಶುರುವಾಗಿದೆ. ಪಾಕಿಸ್ತಾನಿ ವ್ಯಕ್ತಿಯೊಬ್ಬ ವಿಮಾನದಲ್ಲಿ ಭಿಕ್ಷೆ ಬೇಡುತ್ತಿರುವ ದೃಶ್ಯ ವೈರಲ್ ಆಗಿದೆ.

ಟ್ವಿಟ್ಟರ್ ಬಳಕೆದಾರ @MeghUpdates ಹಂಚಿಕೊಂಡಿರುವ ವೀಡಿಯೋದಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬ ವಿಮಾನದಲ್ಲಿ ಪ್ರಯಾಣಿಕರಿಗೆ ಹಣ ಕೇಳುತ್ತಿರುವುದು ವೈರಲ್ ಆಗಿದೆ. ಲಾಹೋರ್‌ನಲ್ಲಿ ಮದರಸಾ ನಿರ್ಮಿಸಲು ತಾನು ಭಿಕ್ಷೆ ಬೇಡಿ ಹಣ ಸಂಗ್ರಹಿಸುತ್ತಿದ್ದೇನೆ ಎಂದು ಆ ವ್ಯಕ್ತಿ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ. “ನೀವು ದಾನ ಮಾಡಲು ಬಯಸಿದರೆ, ಎದ್ದು ನನ್ನ ಬಳಿಗೆ ಬರಬೇಡಿ, ನಾನೇ ನಿಮ್ಮ ಸೀಟಿಗೆ ಬರುತ್ತೇನೆ’ ಎಂದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಸಂದರ್ಭದಲ್ಲಿ ಈ ವಿಡಿಯೋ ಬಂದಿದೆ ಎಂದು ಕೆಲವರು ಟೀಕಿಸಿದ್ದಾರೆ. ಆ ವ್ಯಕ್ತಿ ಅಖ್ತರ್ ಲಾವಾ ಎಂದು ಕೆಲವರು ಹೇಳುತ್ತಾರೆ. ಅವರು ಪಾಕಿಸ್ತಾನದ ಹೆಸರಾಂತ ಉದ್ಯಮಿ ಮತ್ತು ರಾಜಕಾರಣಿ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!