Thursday, September 21, 2023

Latest Posts

ನಡುರಾತ್ರಿ ಪುಂಡರ ಅಟ್ಟಹಾಸ: ಕಾರು, ಆಟೋ ಗಾಜು ಪುಡಿ ಪುಡಿ

ಹೊಸದಿಗಂತ ವರದಿ ಕಲಬುರಗಿ:

ಶುಕ್ರವಾರ ಮಧ್ಯರಾತ್ರಿ ಕೆಲವು ಕಿಡಿಗೇಡಿಗಳು ಅಟ್ಟಹಾಸ ಮೆರೆದು, ಮುನೆ ಮುಂಭಾಗದಲ್ಲಿ ನಿಲ್ಲಿಸಲಾಗಿರುವ ಕಾರು ಮತ್ತು ಆಟೋಗಳ ಗ್ಲಾಸ್,ಗಳನ್ನು ಪುಡಿ ಪುಡಿಯಾಗಿ ಒಡೆದ ಘಟನೆ ಕಲಬುರಗಿ ನಗರದ ಹೊರವಲಯದಲ್ಲಿ ನಡೆದಿದೆ.

ಕಲಬುರಗಿ ಹೊರವಲಯದ ಸುಲ್ತಾನಪುರದಲ್ಲಿ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ 2 ಕಾರು, ನಾಲ್ಕು ಆಟೋಗಳ ಗ್ಲಾಸ್‌ಗಳನ್ನು ಪುಡಿ ಪುಡಿ ಮಾಡಿದ್ದಾರೆ.

ಸುಮಾರು 5 ರಿಂದ 6 ಜನರ ಪುಂಡ ಪೋಕರಿಗಳಿಂದ ಈ ಕೃತ್ಯ ನಡೆದಿದೆ ಎಂದು ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ್ದು, ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.

ಕಲಬುರಗಿ ಸಬ್ ಅರ್ಬನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!