ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಇತ್ತೀಚೆಗೆ 2 ಚೀತಾಗಳು (Cheetah) ಸಾವನ್ನಪ್ಪಿದ್ದು, ಇದಕ್ಕೆ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್ಗಳಿಂದ (Radio Collar) ಉಂಟಾಗಿದ್ದ ಸೋಂಕೇ ಕಾರಣ ಎನ್ನಲಾಗುತ್ತಿದ್ದು, ಆದ್ರೆ ಚೀತಾಗಳು ಮೃತಪಟ್ಟಿರುವುದು ನೈಸರ್ಗಿಕ ಕಾರಣಗಳಿಂದಾಗಿ ಹೊರತು ರೇಡಿಯೊ ಕಾಲರ್ಗಳಿಂದ ಅಲ್ಲ ಎಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.
‘ರೇಡಿಯೊ ಕಾಲರ್ಗಳಿಂದಾಗಿ ಚೀತಾಗಳು ಸಾವಿಗೀಡಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ಈ ವರದಿಗಳು ಊಹೆಗಳನ್ನು ಆಧರಿಸಿವೆ ಮತ್ತು ಅದಕ್ಕೆ ವೈಜ್ಞಾನಿಕ ಆಧಾರವಿಲ್ಲ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಚೀತಾ ಯೋಜನೆಗೆ ಉತ್ತೇಜನ ನೀಡಲು ಚೀತಾ ಸಂಶೋಧನಾ ಕೇಂದ್ರ ಸೇರಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರದ ಚೀತಾ ಯೋಜನಾ ಸಮಿತಿಯು ಯೋಜನೆಯ ಅಭಿವೃದ್ಧಿಯನ್ನು ಕೂಲಂಕುಶವಾಗಿ ಪರಿಶೀಲಿಸುತ್ತಿದೆ. ಯೋಜನೆಯ ಬೆಳವಣಿಗೆ ಕುರಿತು ಸಮಿತಿ ತೃಪ್ತಿ ಹೊಂದಿದೆ ಎಂದು ತಿಳಿಸಿದೆ.