ದಿನಭವಿಷ್ಯ| ಖಾಸಗಿ ಸಂಬಂಧದಲ್ಲಿ ಗೊಂದಲ,ಅನುಮಾನ ಉಂಟಾದೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಕಾರ್ಯಗಳು ಸಾಮಾಜಿಕವಾಗಿ  ನಿಮ್ಮ ಹೆಸರು ಜನಪ್ರಿಯಗೊಳ್ಳಲು ನೆರವಾಗುತ್ತವೆ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.

ವೃಷಭ
ಹಣದ ವ್ಯವಹಾರಗಳಲ್ಲಿ  ಹೆಚ್ಚು ಎಚ್ಚರಿಕೆಯಿಂದ ವರ್ತಿಸಿ. ಕೆಲವು ವ್ಯವಹಾರಗಳು ನಿಮ್ಮ ಮೇಲಿನ  ಒತ್ತಡ ಹೆಚ್ಚಿಸುವುದು. ಖರ್ಚು ನಿಯಂತ್ರಿಸಿರಿ.

ಮಿಥುನ
ಖಾಸಗಿ ಸಂಬಂಧದಲ್ಲಿ ಗೊಂದಲ,ಅನುಮಾನ ಉಂಟಾದೀತು. ಅದನ್ನು ಪರಿಹರಿಸಿಕೊಳ್ಳಿ. ವೃಥಾ  ವದಂತಿಗಳಿಗೆ ಕಿವಿಗೊಡದಿರಿ. ಆರ್ಥಿಕ ಒತ್ತಡ ಹೆಚ್ಚಳ.

ಕಟಕ
ಹೆಚ್ಚಿನ ವಿಶೇಷವಿಲ್ಲದ ದಿನ. ವೃತ್ತಿವ್ಯವಹಾರ ಸುಗಮ. ಕೌಟುಂಬಿಕ ಆಗುಹೋಗುಗಳು ಅಸಮಾಧಾನ ಸೃಷ್ಟಿಸಿದರೂ ಬಳಿಕ ನಿರಾಳತೆ.

ಸಿಂಹ
ಇಂದು ಭಾವುಕ ವಿಷಯದಲ್ಲಿ ನೀವು ನೋವುಣ್ಣುವ ಪ್ರಸಂಗ ಬರಬಹುದು. ಆಪ್ತರೊಬ್ಬರ ನಡೆನುಡಿ ನಿಮಗೆ ಅಸಹನೀಯ ಎನಿಸಬಹುದು.

ಕನ್ಯಾ
ನಿಮಗೆ ಸರಿ ಅನಿಸಿದ  ಕೆಲಸ ಮಾಡುತ್ತಾ ಹೋಗಿ. ಇತರರು ಏನು ಆಡುತ್ತಾರೆ ಎಂಬುದರ ಕುರಿತು ತಲೆ ಕೆಡಿಸಿಕೊಳ್ಳದಿರಿ. ಬಂಧುಗಳ ನೆರವು.

ತುಲಾ
ಆಪ್ತರ ಜತೆ ಬಿರುಕು ಮೂಡಿಸಲು ಕೆಲವರು ಯತ್ನಿಸುವರು. ಅದಕ್ಕೆ ಅವಕಾಶ ಕೊಡದಿರಿ. ಸಂಬಂಧದಲ್ಲಿ ನಂಬಿಕೆ ಮುಖ್ಯ. ಆತುರದ ನಿರ್ಧಾರ ಬೇಡ.

ವೃಶ್ಚಿಕ
ವೃತ್ತಿಯಲ್ಲಿ ಸವಾಲು ಎದುರಿಸುವಿರಿ. ಇದೇವೇಳೆ, ಪ್ರೀತಿಯ ವಿಚಾರದಲ್ಲೂ ಅನಪೇಕ್ಷಿತ ಬೆಳವಣಿಗೆ. ಸಂಭಾಳಿಸಿಕೊಂಡು ಮುಂದುವರಿಯಿರಿ.

ಧನು
ಸವಾಲಿನ ದಿನ. ಖಾಸಗಿ ಬದುಕಲ್ಲಿ ಮತ್ತು ವೃತ್ತಿಯಲ್ಲಿ ಏರುಪೇರು  ಎದುರಿಸುವಿರಿ. ಭಾವನಾತ್ಮಕ ಸಂಘರ್ಷ. ಸಮಚಿತ್ತದಿಂದ ವ್ಯವಹರಿಸಿ.

ಮಕರ
ನಿಮ್ಮ ವರ್ತನೆಯನ್ನು  ನೀವೇ ಪರಾಮರ್ಶೆಗೆ ಒಳಪಡಿಸಿ. ಆಗ ನಿಮ್ಮ ಸರಿ-ತಪ್ಪು ಅರಿಯುವುದು. ಇತರರ ಮೇಲೆ ನಿಮ್ಮ ಅಭಿಪ್ರಾಯ ಹೇರದಿರಿ.

ಕುಂಭ
ದಿನವಿಡೀ ಅಸ್ಥಿರ ಭಾವನೆ, ಆತಂಕ ಕಾಡುವುದು. ಖಾಸಗಿ ಬದುಕಲ್ಲಿ  ನಡೆಯುವ ಕೆಲವು ಬೆಳವಣಿಗೆ ನಿಮ್ಮ ಮನಸ್ಸಿನ ನೆಮ್ಮದಿ ಕಲಕುವುದು.

ಮೀನ
ಕೆಲಸದ ಒತ್ತಡ ಅಧಿಕ. ನೀವು ತಾಳ್ಮೆಯಿಂದ ವ್ಯವಹರಿಸಿದ್ದಾದರೆ ಎಲ್ಲವನ್ನು ಸರಿಯಾಗಿ ನಿಭಾಯಿಸುವಿರಿ. ವಾಗ್ವಾದ, ಸಂಘರ್ಷಕ್ಕೆ ಇಳಿಯದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!