ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಠಕ್ಕರ್ ನೀಡೋದಕ್ಕೆ ಕಾಂಗ್ರೆಸ್ ಸಜ್ಜಾಗಿದ್ದು, ಪ್ರಧಾನಿ ಮೋದಿಯನ್ನು ಸೋಲಿಸುವ ಇರಾದೆ ಹೊಂದಿದೆ.
ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೂಡ ಮಹಾಮೈತ್ರಿಕೂಟ ಸಭೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದ್ದು, ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಲಿದ್ದಾರೆ, ತದನಂತರ ಸಾಕಷ್ಟು ಮುಖ್ಯ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. 4 ಗಂಟೆಗೆ ತ್ರಿಕೂಟ ಸಭೆಯ ನಿರ್ಣಯದ ಘೋಷಣೆ ಮಾಡಲಿದ್ದಾರೆ.
ತದನಂತರ ಸಂಜೆ ಏಳು ಗಂಟೆಗೆ ಸಂಪುಟ ಸಭೆ ನಡೆಯಲಿದೆ. ಮೈತ್ರಿಕೂಟದ ಸಭೆಯಲ್ಲಿ ಎಲ್ಲ ಸಚಿವರಿಗೂ ಆಹ್ವಾನ ನೀಡಿಲ್ಲ, ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಮಾಧ್ಯಮದವರಿಗೂ ಎಂಟ್ರಿ ನೀಡಿದ್ದು, ಸಭೆಯಲ್ಲಿ ತೀರ್ಮಾನದ ಬಗ್ಗೆ ಕಾದು ನೋಡಬೇಕಿದೆ.