ಐದು ಅಂತಸ್ತಿನ ಕಟ್ಟಡ ಕುಸಿತ: 12 ಮಂದಿ ಸ್ಥಳದಲ್ಲೇ ದಾರುಣ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐದು ಅಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಈಜಿಪ್ಟ್ ನ ರಾಜಧಾನಿ ಕೈರೋದಲ್ಲಿ ನಡೆದಿದೆ.

ಈ ಅಪಘಾತದಿಂದ ಸುತ್ತಮುತ್ತಲಿನ ಜನರಲ್ಲಿ ಭೀತಿಯನ್ನು ಹೆಚ್ಚಿಸಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೈರೋದ ನೆರೆಯ ನಗರ ಹಡಾಕ್ ಅಲ್-ಕುಬ್ಬಾದಲ್ಲಿ ಕಟ್ಟಡ ಕುಸಿತಗೊಂಡಿದ್ದು, ಅವಶೇಷಗಳ ಅಡಿಯಲ್ಲಿ ಶವಗಳನ್ನು ರಕ್ಷಣಾ ತಂಡಗಳು ಪತ್ತೆ ಮಾಡುವ ಕಾರ್ಯ ಮುಂದುವರಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 60,000 ಈಜಿಪ್ಟ್ ಪೌಂಡ್ (ಸುಮಾರು 1,940 ಯುಎಸ್ಡಿ) ನೀಡುವುದಾಗಿ ಈಜಿಪ್ಟ್ನ ಸಾಮಾಜಿಕ ಒಗ್ಗಟ್ಟಿನ ಸಚಿವಾಲಯ ಹೇಳಿದೆ.

ಗಾಯಾಳುಗಳಿಗೆ ನೆರವು ನೀಡುವುದಾಗಿ ಮತ್ತು ಆಸ್ತಿಪಾಸ್ತಿಗಳಿಗೆ ಆಗಿರುವ ಹಾನಿಯನ್ನು ಮೇಲ್ವಿಚಾರಣೆ ಮಾಡುವುದಾಗಿ ಈಜಿಪ್ಟ್ ಸಚಿವಾಲಯ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!