ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಕೇಂದ್ರ ಸರ್ಕಾರ ಈ ಅಧಿವೇಶನದಲ್ಲಿ 31 ಮಸೂದೆಗಳಿಗೆ ಅಂಗೀಕಾರ ಪಡೆಯುವ ಗುರಿ ಹೊಂದಿದೆ, ಇತ್ತ ಪ್ರತಿಪಕ್ಷಗಳು ಮಣಿಪುರ ಹಿಂಸಾಚಾರ ಮತ್ತಿತರ ವಿಷಯಗಳನ್ನು ಪ್ರಸ್ತಾಪ ಮಾಡಲು ಸಿದ್ಧತೆ ನಡೆಸಿವೆ.
ರಾಹುಲ್ ಗಾಂಧಿ ಅನರ್ಹತೆ, ದೆಹಲಿ ಸುಗ್ರೀವಾಜ್ಞೆ, ಪ್ರವಾಹ, ಬಾಲಸೋರ್ ರೈಲು ದುರಂತ, ಚೀನಾಗಡಿ, ನಿರುದ್ಯೋಗ, ಹಣದುಬ್ಬರ ಹಾಗೂ ಬೆಲೆ ಏರಿಕೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿಯುವ ಸಾಧ್ಯತೆ ಇದೆ.
ಮುಂಗಾರು ಅಧಿವೇಶನಕ್ಕೆ ಯಾವುದೇ ತೊಂದರೆಯಾಗಂತೆ ನಡೆಯಲು ನಿನ್ನೆ ಸರ್ವಪಕ್ಷಗಳ ಸಭೆ ನಡೆದಿದೆ. ಇಂದಿನಿಂದ ಅಧಿವೇಶನ ಆರಂಭವಾಗಿ ಆ.11ಕ್ಕೆ ಮುಕ್ತಾಯವಾಗಲಿದೆ.