ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಹಮದಾಬಾದ್‌ನಲ್ಲಿ ತಡರಾತ್ರಿ ಅಪಘಾತವೊಂದು ಸಂಭವಿಸಿದ್ದು, ಅದನ್ನು ನೋಡಲು ಜನರು ಧಾವಿಸಿದ್ದಾರೆ. ನಿಂತು ನೋಡುತ್ತಿದ್ದ ಜನರ ಮೇಲೆ ಜಾಗ್ವಾರ್ ಕಾರ್ ಯಮನಂತೆ ಎರಗಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ಅಪಘಾತ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದ ಪೊಲೀಸರು, ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಆರು ಮಂದಿ ಸ್ಥಳದಲ್ಲೇ ಪ್ರಾಣ ಚೆಲ್ಲಿದರೆ ಇನ್ನು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
13 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕನ ಜೀವ ಉಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮೊದಲು ಸಂಭವಿಸಿದ ಅಪಘಾತವನ್ನು ನೋಡಲು ನಿಂತಿದ್ದವರಲ್ಲಿ ಹೆಚ್ಚಿನವರು ಕಾಲೇಜು ವಿದ್ಯಾರ್ಥಿಗಳೇ ಆಗಿದ್ದರು. ಎಸ್‌ಯುವಿ ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿತ್ತು. ಜನರ ಗುಂಪಿಗೆ ಸೀದ ಬಂದು ಜಾಗ್ವಾರ್ ನುಗ್ಗಿದ್ದು, ಘಟನಾ ಸ್ಥಳದಿಂದ 20 ಅಡಿ ದೂರದಲ್ಲಿ ಜನರು ಬಿದ್ದು ಮೃತಪಟ್ಟಿದ್ದಾರೆ.
Ahmedabad, Gujarat | An accident took place at the ISKCON flyover on Sarkhej-Gandhinagar (SG) highway. pic.twitter.com/0xVFL147Xd
— ANI (@ANI) July 20, 2023