ಮಣಿಪುರ, ರಾಜಸ್ಥಾನದಲ್ಲಿ ಭೂಕಂಪ: ಜೈಪುರದಲ್ಲಿ 30 ನಿಮಿಷಗಳಲ್ಲಿ ಮೂರು ಬಾರಿ ಕಂಪಿಸಿದ ಭೂಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು ಬೆಳಿಗ್ಗೆ ರಾಜಸ್ಥಾನದಲ್ಲಿನ ಜೈಪುರದ ಮೂರು ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿದೆ. ಕೇವಲ 30 ನಿಮಿಷಗಳ ಅವಧಿಯಲ್ಲಿ ಮೂರು ಭಾರಿ ಮೂಮಿ ಕಂಪಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಶುಕ್ರವಾರ ಬೆಳಗ್ಗೆ 4 ಗಂಟೆಯಿಂದ 4;30 ನಿಮಿಷಗಳ ಅವಧಿಯಲ್ಲಿ ಮೂರು ಬಾರಿ ಭೂಮಿ ನಡುಗಿದೆ. ಅದರಲ್ಲಿ 4.09ರ ಸುಮಾರಿಗೆ 4.4 ತೀವ್ರತೆ ದಾಖಲಾಗಿದೆ, 4.22ರ ಸುಮಾರಿಗೆ 3.1 ತೀವ್ರತೆ ಹಾಗೂ 4.25ರ ಸುಮಾರಿಗೆ 3.4 ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ.

ಮಣಿಪುರದಲ್ಲಿ 3.5 ತೀವ್ರತೆ ದಾಖಲು:

ಶುಕ್ರವಾರ ಮುಂಜಾನೆ ಸುಮಾರು 5.01ಕ್ಕೆ ಮಣಿಪುರದ ಉಖ್ರುಲ್‌ನಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಭೂಕಂಪವು 20 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.

ಭೂಕಂಪನದಿಂದ ಈವರೆಗೆ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!