ಬಜರಂಗ್ ಪುನಿಯಾ, ವಿನೇಶ್ ಫೋಗಟ್​​ಗೆ ಬಿಗ್ ರಿಲೀಫ್: ಏಷ್ಯನ್ ಗೇಮ್ಸ್‌ಗೆ ನೇರ ಪ್ರವೇಶ ಪ್ರಶ್ನಿಸಿದ ಅರ್ಜಿ ವಜಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕುಸ್ತಿಪಟುಗಳಾದ ಬಜರಂಗ್ ಪುನಿಯಾ (Bajrang Punia )ಮತ್ತು ವಿನೇಶ್ ಫೋಗಟ್ (Vinesh Phogat) ಅವರಿಗೆ ನೀಡಲಾಗಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಟ್ರಯಲ್ಸ್‌ಗೆ ಹೋಗದೆ ನೇರವಾಗಿ ಭಾರತವನ್ನು ಪ್ರತಿನಿಧಿಸಲು ಅವಕಾಶದ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (Indian Olympic Associations) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ.
ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರಿಗೆ ನೀಡಲಾದ ವಿನಾಯಿತಿಯಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್ ಶನಿವಾರ ನಿರಾಕರಿಸಿದೆ. ಪುನಿಯಾ ಮತ್ತು ಫೋಗಟ್ ಅವರಿಗೆ ವಿನಾಯಿತಿ ನೀಡಿರುವುದನ್ನು ಕುಸ್ತಿಪಟುಗಳಾದ ಆಂಟಿಮ್ ಪಂಘಲ್ ಮತ್ತು ಸುಜೀತ್ ಕಲ್ಕಲ್ ಅವರು ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ವಿಡಿಯೊ ಸಂವಹನದಲ್ಲಿ ಮಾತನಾಡಿದ ಕುಸ್ತಿಪಟು ಸುಜೀತ್ ಕಲ್ಕಲ್, ಯಾವುದೇ ಟ್ರಯಲ್ಸ್ ನಲ್ಲಿ ಭಾಗವಹಿಸದೇ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಬಜರಂಗ್ ಪುನಿಯಾಗೆ ಅನುಮತಿ ನೀಡಲಾಗಿದೆ . 19 ವರ್ಷದ ಪಂಘಲ್ ಮತ್ತು 21 ವರ್ಷದ ಸುಜೀತ್ ಇಬ್ಬರೂ ಕುಸ್ತಿಪಟುಗಳಿಗೆ ಯಾವುದೇ ವಿನಾಯಿತಿಗಳನ್ನು ನೀಡುವುದನ್ನು ವಿರೋಧಿಸಿದ್ದು ಎಲ್ಲರಿಗೂ ನ್ಯಾಯಯುತ ಮತ್ತು ಸಮಾನ ರೀತಿಯಲ್ಲಿ ಟ್ರಯಲ್ಸ್ ನಡೆಸುವ ಮಹತ್ವವನ್ನು ಒತ್ತಿ ಹೇಳಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಕುಸ್ತಿಪಟು ವಿಶಾಲ್ ಕಾಳಿರಾಮನ್, ನಾನು ಕೂಡ 65 ಕೆಜಿಯೊಳಗಿನ ವಿಭಾಗದಲ್ಲಿ ಆಡುತ್ತೇನೆ. ಏಷ್ಯನ್ ಗೇಮ್ಸ್‌ಗೆ ಪುನಿಯಾಗೆ ಯಾವುದೇ ಟ್ರಯಲ್ಸ್ ಇಲ್ಲದೇ ನೇರ ಪ್ರವೇಶ ನೀಡಲಾಗಿದೆ. ಅವರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ, ನಾವು ಅಭ್ಯಾಸ ಮಾಡುತ್ತಿದ್ದೆವು. ನಾವು ಟ್ರಯಲ್ಸ್​​ಗಾಗಿ ಮನವಿ ಮಾಡುತ್ತೇವೆ.ಟ್ರಯಲ್ಸ್ ಮಾಡಬೇಕು , ಇಲ್ಲವಾದರೆ ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ. 15 ವರ್ಷಗಳಿಂದ ನಾವು ಅಭ್ಯಾಸ ಮಾಡುತ್ತಿದ್ದೇವೆ. ಬಜರಂಗ್ ಪುನಿಯಾ ಅವರು ಏಷ್ಯನ್ ಗೇಮ್ಸ್‌ನಲ್ಲಿ ಆಡುವುದಿಲ್ಲ ಎಂದು ನಿರಾಕರಿಸಿದರೆ ಮಾತ್ರ ಬೇರೆಯವರಿಗೆ ಅವಕಾಶ ಸಿಗುತ್ತದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!