ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರೆವಣಿಗೆ, ಓರ್ವ ವ್ಯಕ್ತಿಯ ಶಿರಚ್ಛೇದನದಂತಹ ಕ್ರೂರ ಘಟನೆ ದೇಶವನ್ನೇ ಬೆಚ್ಚಿಬೀಳಿಸಿರುವ ಬೆನ್ನಿಗೆ ಇದೀಗ ಇನ್ನೊಂದು ಪೈಶಾಚಿಕ ಘಟನೆ ಬೆಳಕಿಗೆ ಬಂದಿದೆ.
ಮೇ.4 ರಂದು ನಡೆದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರೆವಣಿ ವಿಡಿಯೋ ಹರಿದಾಡುವ ಮೂಲಕ ದೇಶದಲ್ಲೇ ಆಕ್ರೋಶದ ಕಟ್ಟೆ ಹೊಡೆದಿತ್ತು. ಇದರ ಬೆನ್ನಲ್ಲೇ ಇದೀಗ ಇದೇ ದಿನ ಬೆತ್ತಲೇ ಮೆರವಣಿಗೆ ಘಟನೆ ನಡೆದ 40 ಕಿಲೋಮೀಟರ್ ದೂರದಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ.
ಇಲ್ಲಿನ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಇಬ್ಬರು ಯುವತಿಯ ಮೇಲೆ 100ಕ್ಕೂ ಹೆಚ್ಚು ಮಂದಿಯ ಉದ್ರಿಕ್ತರ ಗುಂಪು ದಾಳಿ ಮಾಡಿ ಅತ್ಯಾಚಾರ ಎಸಗಿತ್ತು. ಬಳಿಕ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಇಂಫಾಲ್ ಪೂರ್ವ ಜಿಲ್ಲೆಯ ಕುನಂಗ್ ಮಾಮಂಗ್ ಏರಿಯಾದಲ್ಲಿ 21 ವರ್ಷ ಹಾಗೂ 24 ವರ್ಷದ ಇಬ್ಬರು ಯುವತಿಯರು ಕಾರ್ ಸರ್ವೀಸ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು.
ಇಬ್ಬರು ಕಾರು ವಾಶಿಂಗ್ ಕೆಲಸದಲ್ಲಿದ್ದ ತೊಡಗಿಸಿಕೊಂಡಿದ್ದ ವೇಳೆ ಏಕಾಏಕಿ ಕಾರು ವಾಶಿಂಗ್ ಕೇಂದ್ರಕ್ಕೆ ನುಗ್ಗಿದ್ದ 100ಕ್ಕೂ ಹೆಚ್ಚು ಜನರಿದ್ದ ಉದ್ರಿಕ್ತರ ಗುಂಪು ಇಬ್ಬರು ಯುವತಿಯರ ಮೇಲೆ ದಾಳಿಗೆ ಮುಂದಾಗಿದೆ. ಗುಂಪಿನಲ್ಲಿದ್ದ ಮಹಿಳೆಯರು ನೇರವಾಗಿ ಕಾರು ವಾಶಿಂಗ್ ಕೇಂದ್ರದೊಳಗೆ ಯುವತಿಯರನ್ನು ಎಳೆದೊಯ್ದಿದ್ದಾರೆ. ಬಳಿಕ ಗುಂಪಿನಲ್ಲಿದ್ದ ಪುರುಷರು ಗ್ಯಾಂಗ್ ರೇಪ್ ಮಾಡಿದ್ದಾರೆ.
ಈ ವೇಳೆ ಕಾರು ವಾಶಿಂಗ್ ಕೇಂದ್ರದಲ್ಲಿದ್ದ ಪುರುಷ ಸಿಬ್ಬಂದಿಗಳ ಮೇಲೂ ಥಳಿಸಿದ್ದಾರೆ. ಈ ಆ ಕ್ಷಣ ನಮಗೆ ಅತ್ತ ಕೋಣೆಯೊಳಗೆ ಯುವತಿಯರ ಚೀರಾಟ ಕೀಳಿಸುತ್ತಿತ್ತು. ಆದರೆ ನಾವು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಈ ಕುರಿತು ದೂರು ದಾಖಲಿಸುವ ಧೈರ್ಯವೂ ನಮಗಿಲ್ಲ. ದಾಖಲಿಸಿದರೆ ನಾಳೆ ನಾವು ಹಾಗೂ ನಮ್ಮ ಕುಟುಂಬ ಪರಿಸ್ಥಿತಿ ಇದಕ್ಕಿಂತ ಭಿನ್ನವಲ್ಲ ಎಂದು ಕಾರು ವಾಶಿಂಗ್ ಕೇಂದ್ರದ ಸಿಬ್ಬಂದಿಗಳು ಹೇಳಿದ್ದಾರೆ.
ಇಬ್ಬರು ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ ಉದ್ರಿಕ್ತರ ಗುಂಪು ಬಳಿಕ ಯುವತಿಯರ ದೇಹವನ್ನು ಸರ್ವೀಸ್ ಕೇಂದ್ರದ ಪಕ್ಕದಲ್ಲೆ ಬೀಸಾಡಿ ಹೋಗಿದ್ದರು. ಆದ್ರೆ ಈ ಕ್ಷಣ ಯಾರೊಬ್ಬರು ದೂರು ನೀಡಲಿಲ್ಲ. ಆದ್ರೆ ಮೇ. 16 ರಂದು ಯುವತಿ ತಾಯಿ ಧೈರ್ಯ ಮಾಡಿ ದೂರು ನೀಡಿದ್ದಾರೆ. ದೂರಿನಲ್ಲಿ ತನ್ನ ಪುತ್ರಿ ಹಾಗೂ ಇನ್ನೊಬ್ಬಳು ಯುವತಿ ಮೇಲೆ 100ಕ್ಕೂ ಹೆಚ್ಚು ಉದ್ರಿಕ್ತರ ಗುಂಪು ಅತ್ಯಾಚಾರ ಎಸಗಿ ಹತ್ಯೆ ಮಾಡಿದೆ . ತಪ್ಪತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದರು.
ಆದರೆ ಮೇ.16 ರಂದು ದೂರು ದಾಖಲಾಗಿದ್ದರೂ ಇದುವರೆಗೆ ಈ ಪ್ರಕರಣ ಸಂಬಂಧ ಒಬ್ಬರೂ ಅರೆಸ್ಟ್ ಆಗಿಲ್ಲ. ಇದೇ ಪೊಲೀಸ್ ಠಾಣೆಯಲ್ಲೇ ಮಹಿಳೆಯರಿಬ್ಬರ ಬೆತ್ತಲೆ ಮೆರವಣಿಗೆ ಪ್ರಕರಣ ಕೂಡ ದಾಖಲಾಗಿದೆ.