ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡಿದ ನಶೆಯಲ್ಲಿ ವ್ಯಕ್ತಿಯೋರ್ವ ಹೆಂಡತಿಗೆ ಮುತ್ತಿಡಲು ಮುಂದಾಗಿದ್ದಾನೆ. ಆಗ ಹೆಂಡತಿ ಮಾಡಿದ ಕೆಲಸಕ್ಕೆ ಇನ್ಮುಂದೆ ಆತ ಚುಂಬಿಸುವುದನ್ನೇ ಮರೆಯುವಂತಹ ಘಟನೆ ಆಂಧ್ರಪ್ರದೇಶದ ಕರ್ನೂಲ್ನಲ್ಲಿ ನಡೆದಿದೆ.
ದಂಪತಿಯು ಮದ್ಯಪಾನ ಮಾಡುತ್ತಿದ್ದರು. ಆಗ ಪತಿಯು ತನ್ನ ಪತ್ನಿಗೆ ಚುಂಬಿಸಿದ್ದಾನೆ. ಅದರಿಂದ ಕೋಪಗೊಂಡ ಪತ್ನಿಯು ಗಂಡನ ನಾಲಗೆಯನ್ನು ಹರಿದು ಹೋಗುವಂತೆ ಕಚ್ಚಿದ್ದಾಳೆ.
ಆಕೆ ಮಾಡಿದ ಕೆಲಸದಿಂದ ಪತಿಯ ನಾಲಿಗೆಯಿಂದ ಧಾರಾಕಾರವಾಗಿ ರಕ್ತ ಹರಿಯಲು ಪ್ರಾರಂಭಿಸಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಡಿದ ನಶೆಯಲ್ಲಿ ಮಾಡಿದ ಕೆಲಸದಿಂದಾಗಿ ಆತ ಮತ್ತೆಂದೂ ಚುಂಬಿಸುವ ಪ್ರಯತ್ನ ಮಾಡಲಾರ ಎಂಬಂತಿದೆ ಈ ಘಟನೆ.