Saturday, December 9, 2023

Latest Posts

ಕಾಂಗ್ರೆಸ್ ನತ್ತ ತೇಜಸ್ವಿನಿ ಅನಂತ ಕುಮಾರ್?: ಈ ಕುರಿತು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇಂದ್ರ ಸಚಿವರಾಗಿದ್ದ ದಿ. ಅನಂತ ಕುಮಾರ್ ಪತ್ನಿ ತೇಜಸ್ವಿನಿ ಅನಂತ ಕುಮಾರ್ (Tejaswini Ananth Kumar) ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದು, ಈ ಕುರಿತುಸ್ವತಃ ತೇಜಸ್ವಿನಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯಲ್ಲಿದ್ದೇನೆ (BJP). ಅನಂತ್ ಕುಮಾರ್ ಕಟ್ಟಿ ಬೆಳೆಸಿದ ಪಕ್ಷ ಬಿಜೆಪಿ. ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಪಕ್ಷದ ಉಪಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

I AM WEDDED TO THE PARTY. ಸೈದ್ಧಾಂತಿಕವಾಗಿ ನಾನು ಬಿಜೆಪಿ ಸಿದ್ಧಾಂತ ಜೊತೆ ಬದ್ಧವಾಗಿದ್ದೇನೆ ಎಂದರು.

ಬಳಿಕ ಮಾತು ಮುಂದುವರಿಸಿ , ಅನಂತ್ ಕುಮಾರ್ (Ananth Kumar) ಅವರ ಅನುಪಸ್ಥಿತಿಯಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆ ಇದು. ಸೂಕ್ತವಾದ ವಿರೋಧ ಪಕ್ಷದ ನಾಯಕ ಆಯ್ಕೆಯಾಗುತ್ತಾರೆ, ಕಾದು ನೋಡಿ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!