ಹೊಸದಿಗಂತ ಡಿಜಿಟಲ್ ಡೆಸ್ಕ್:
ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ಅರಿಶಿಣ ಗುಂಡಿ ಜಲಪಾತಕ್ಕೆ ಜಾರಿದ್ದ ಯುವಕನ ಮೃತದೇಹ ಇನ್ನೂ ಪತ್ತೆಯಾಗಿಲ್ಲ.
ಭದ್ರಾವತಿಯ ಶರತ್ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಇದುವರೆಗೂ ಮೃತದೇಹ ಪತ್ತೆಯಾಗಿಲ್ಲ. ಎಂಟು ಗಂಟೆ ಕಾರ್ಯಾಚರಣೆ ನಡೆಸಿಯೂ ಮೃತದೇಹ ಸಿಗದೆ ರಕ್ಷಣಾ ಕಾರ್ಯಕರ್ತರು ಪೊಲೀಸರು ವಾಪಾಸಾಗಿದ್ದಾರೆ.