ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಪಮಾನ ಹೆಚ್ಚಾಗುತ್ತಿದ್ದಂತೆ ಚೀನಾದಲ್ಲಿ ಜನರು ‘ಫೇಸ್‌ಕಿನಿಸ್’ ಮುಖವಾಡಗಳನ್ನು ಆಶ್ರಯಿಸುತ್ತಿದ್ದಾರೆ. ಈ ಮುಖವಾಡದ ವಿಶೇಷತೆ ಏನು? ಇವುಗಳಿಗೆ ಈಗ ಬೇಡಿಕೆ ಏಕೆ ಎಂಬುದನ್ನು ನೋಡೋಣ.
ಚೀನಾದಲ್ಲಿ ದಾಖಲೆ ಮುರಿಯುವ ಬಿಸಿಲಿನ ಝಳಕ್ಕೆ ಜನ ಪರಿತಪಿಸುತ್ತಿದ್ದಾರೆ. ಜನರು ಶಾಖದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. 35 ಡಿಗ್ರಿಗಿಂತ ಹೆಚ್ಚಿನ ತಾಪಮಾನವನ್ನು ಸರಿದೂಗಿಸಲು ಅಲ್ಲಿನವರು ‘ಫೇಸ್ಕಿನಿಸ್’ ಅನ್ನು ಆಶ್ರಯಿಸಿದ್ದಾರೆ. ಅವುಗಳನ್ನು ಪಾಲಿಯೆಸ್ಟರ್‌ನಂತಹ ಹಗುರವಾದ ಸಿಂಥೆಟಿಕ್ ಬಟ್ಟೆಯಿಂದ ತಯಾರಿಸಲಾಗುತ್ತದೆ. ಕ್ಯಾಪ್ಗಳ ಜೊತೆಗೆ, ಪೂರ್ಣ ಮುಖವಾಡಗಳು ಈಗ ಬೇಡಿಕೆಯಲ್ಲಿವೆ. ಬೀಜಿಂಗ್‌ನಲ್ಲಿ ತಾಪಮಾನವು ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟುತ್ತಿದ್ದಂತೆ, “ಫೇಸ್ಕಿನಿಸ್” ಮುಖವಾಡಗಳನ್ನು ಧರಿಸುವುದು ಅಲ್ಲಿನ ಅತ್ಯಂತ ಫ್ಯಾಷನ್ ಪ್ರವೃತ್ತಿಯಾಗಿದೆ.
ಕಣ್ಣುಗಳು ಮತ್ತು ಮೂಗಿನ ಹೊಳ್ಳೆಗಳನ್ನು ಹೊರತುಪಡಿಸಿ ಇಡೀ ಮುಖವನ್ನು ಮುಚ್ಚುವ ವಿಶೇಷತೆಯೊಂದಿಗೆ ತಯಾರಿಸಲಾಗಿದೆ. ಯುವಿ ನಿರೋಧಕ ಬಟ್ಟೆಯಿಂದ ಮಾಡಿದ ಅಗಲವಾದ ಅಂಚುಗಳ ಟೋಪಿಗಳು ಮತ್ತು ಹಗುರವಾದ ಜಾಕೆಟ್‌ಗಳು ಈಗ ಚೀನಾದಲ್ಲಿ ಜನಪ್ರಿಯವಾಗಿವೆ. ಸೂರ್ಯನ ಶಾಖವಷ್ಟೇ ಅಲ್ಲದೆ ಜೆಲ್ಲಿ ಮೀನುಗಳು, ಕೀಟಗಳು ಮತ್ತು ಇತರ ಉದ್ರೇಕಕಾರಿ ಜಂತುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇವುಗಳ ಮೊರೆ ಹೋಗಿದ್ದಾರೆ.