February 8, 2026
Sunday, February 8, 2026
spot_img

ತೆಲುಗು ಖ್ಯಾತ ನಟಿ ಆಮಾನಿ ಬಿಜೆಪಿಗೆ ಸೇರ್ಪಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೆಲುಗು ನಟಿ ಆಮಾನಿ ಅವರು ಶನಿವಾರ ಹೈದರಾಬಾದ್‌ನಲ್ಲಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಎನ್ ರಾಮಚಂದರ್ ರಾವ್ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.

ಆಮಾನಿ ಜೊತೆಗೆ ಖ್ಯಾತ ಮೇಕಪ್ ಕಲಾವಿದೆ ಶೋಭಾ ಲತಾ ಕೂಡ ಕೇಸರಿ ಪಕ್ಷಕ್ಕೆ ಸೇರಿದ್ದಾರೆ .

1990 ರ ದಶಕದ ಜನಪ್ರಿಯ ನಾಯಕ ನಟಿ ಆಮಾನಿ, ಕಮಲ್ ಹಾಸನ್, ನಾಗಾರ್ಜುನ ಅಕ್ಕಿನೇನಿ, ಬಾಲಕೃಷ್ಣ, ಮತ್ತು ಜಗಪತಿ ಬಾಬು ಸೇರಿದಂತೆ ಹಲವು ಟಾಪ್ ನಟರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಲನಚಿತ್ರಗಳ ಜೊತೆಗೆ, ಅವರು ದೂರದರ್ಶನ ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !