September 28, 2026
Monday, September 28, 2026
spot_img

ಮೋದಿ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್: 1 ಗಂಟೆಯಲ್ಲೇ ಸೀಟು ಫುಲ್, 42 ಸಾವಿರಕ್ಕೂ ಹೆಚ್ಚು ವೇಟಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರ ಸೆಪ್ಟೆಂಬರ್ 8ರ ವಡೋದರಾ ಭೇಟಿ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆಯಷ್ಟೇ ಅಲ್ಲ, ಸಾರ್ವಜನಿಕರು ಭಾಗವಹಿಸೋ ವಿಶಿಷ್ಟ ಪ್ರಯೋಗಕ್ಕೂ ಈಗ ಗಮನ ಸೆಳೆದಿದೆ.

ಇದೇ ಮೊದಲ ಬಾರಿಗೆ ಪ್ರಧಾನಿಯವರ ಸಾರ್ವಜನಿಕ ಕಾರ್ಯಕ್ರಮವೊಂದಕ್ಕೆ ಜನರು BookMyShow ವೇದಿಕೆಯ ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ.

ವಡೋದರಾ ಮಹಾನಗರ ಪಾಲಿಕೆ ‘NaMo for Viksit Bharat’ ಕಾರ್ಯಕ್ರಮದ ನೋಂದಣಿಗಾಗಿ ಈ ಖಾಸಗಿ ಟಿಕೆಟ್‌ ಬುಕ್ಕಿಂಗ್ ವೇದಿಕೆಯನ್ನು ಬಳಸಿದೆ. ಮಂಗಳವಾರ ಮಹಾರಾಜಾ ಸಯಾಜಿರಾವ್ ವಿಶ್ವವಿದ್ಯಾಲಯದ ಪೆವಿಲಿಯನ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ವೃತ್ತಿಪರರು, ಶಿಕ್ಷಣ ಕ್ಷೇತ್ರದವರು, ಉದ್ಯಮಿಗಳು, ಕೈಗಾರಿಕಾ ಪ್ರತಿನಿಧಿಗಳು ಹಾಗೂ ನಾಗರಿಕ ಸಮಾಜದ ಸದಸ್ಯರು ಭಾಗವಹಿಸಲಿದ್ದಾರೆ.

ಒಂದು ಗಂಟೆಯೊಳಗೆ ಸೀಟು ಭರ್ತಿ

ನೋಂದಣಿ ಆರಂಭವಾದ ಕೆಲವೇ ಕ್ಷಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಲಭ್ಯವಿದ್ದ ಎಲ್ಲಾ ಸೀಟುಗಳು ಒಂದು ಗಂಟೆಯೊಳಗೆ ಭರ್ತಿಯಾಗಿವೆ. ಇನ್ನೂ 42,000ಕ್ಕೂ ಹೆಚ್ಚು ಮಂದಿ ವೇಟಿಂಗ್‌ ಲಿಸ್ಟ್‌ಗೆ ಸೇರ್ಪಡೆಯಾಗಿದ್ದು, ಬಳಿಕ ನೋಂದಣಿ ಪ್ರಕ್ರಿಯೆ ನಿಲ್ಲಿಸಲಾಗಿದೆ.

ಇದನ್ನೂ ಓದಿ:

ಕಾರ್ಯಕ್ರಮಕ್ಕೆ ಪ್ರವೇಶವೂ ಸಂಪೂರ್ಣ ಡಿಜಿಟಲ್ ಆಗಿರಲಿದೆ. ನೋಂದಾಯಿತರಿಗೆ BookMyShow ಖಾತೆಯ ಮೂಲಕ ಇ-ಟಿಕೆಟ್ ಹಾಗೂ ಲೈವ್ QR ಕೋಡ್ ನೀಡಲಾಗಿದ್ದು, ಅದನ್ನು ಸ್ಕ್ಯಾನ್ ಮಾಡುವ ಮೂಲಕ ಪ್ರವೇಶ ಕಲ್ಪಿಸಲಾಗುತ್ತದೆ.

ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಇದೇ ವೇಳೆ, ಮೋದಿ ಅವರು ವಡೋದರದಲ್ಲಿ 35,000 ಕೋಟಿ ರೂಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪಶ್ಚಿಮ ಸಮರ್ಪಿತ ಸರಕು ಸಾಗಣೆ ಕಾರಿಡಾರ್‌ನ 326 ಕಿ.ಮೀ ಉದ್ದದ ಮೂರು ವಿಭಾಗಗಳನ್ನು ದೇಶಕ್ಕೆ ಸಮರ್ಪಿಸಲಿದ್ದು, ಹೊಸ ಸರಕು ರೈಲು ಸೇವೆಗಳಿಗೂ ಚಾಲನೆ ನೀಡಲಿದ್ದಾರೆ.

Must Read