ಮೂರನೇ ವರ್ಷಾಚರಣೆ ಸಂಭ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ: ಪುಟಾಣಿ ಮಕ್ಕಳಿಂದ ಪ್ರಧಾನಿ ಮೋದಿಗೆ ಬಂತು ವಿಶೇಷ ಸಂದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇಂದ್ರ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಗೆ ಮೂರನೇ ವರ್ಷಾಚರಣೆ ಸಂಭ್ರಮ. ಈ ಕ್ಷಣದ ಸಂತೋಷವನ್ನು ಪುಟಾಣಿ ಮಕ್ಕಳು ಹಂಚಿಕೊಂಡಿದ್ದು,ಈ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಸಂದೇಶವನ್ನು ನೀಡಿದ್ದಾರೆ.

ರೆಕ್ಕೆಗಳನ್ನು ಬಿಚ್ಚಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವೆವು, ಆಡುವೆವು, ಜಿಗಿಯುವೆವು ಕಲಿಯುವೆವು, ಭಾರತದ ಕೀರ್ತಿಯನ್ನು ಹೆಚ್ಚಿಸುವೆವು. ನಮ್ಮ ಶಿಶುವಿಹಾರದ ಈ ಚಿಕ್ಕ ಸ್ನೇಹಿತರ ಕನಸುಗಳು ಮತ್ತು ಪ್ರತಿಭೆಗಳು ನಿಮಗೂ ಸಂತೋಷವನ್ನು ನೀಡುತ್ತದೆ ಎಂದು ಪ್ರಧಾನಿ ಸಂದೇಶ ನೀಡಿದರು.

ವಿಡಿಯೋ ಮೂಲಕ ಪುಟಾಣಿಗಳು ತಮ್ಮ ಕನಸನ್ನು ಬಿಚ್ಚಿಟ್ಟರು, ಜೊತೆಗೆ ಆತ್ಮೀಯವಾಗಿ ಪ್ರಧಾನಿ ಅವರನ್ನು ಅಹ್ವಾನ ಮಾಡುವ ಮೂಲಕ ಲವ್ ಯು ಮೋದಿಜೀ ಅಂದರು….

ಇದರ ವಿಡಿಯೋ ಹಂಚಿಕೊಂಡ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) , ರಾಷ್ಟ್ರೀಯ ಶಿಕ್ಷಣ ನೀತಿಗೆ ಮೂರು ವರ್ಷ. ಕಳೆದ ಮೂರು ವರ್ಷಗಳಲ್ಲಿ ಮಾಡಿದ ಬದಲಾವಣೆಗಳನ್ನು ಆಚರಿಸಲು, ದೆಹಲಿಯಲ್ಲಿ ಜುಲೈ 29 ರಿಂದ ಎರಡು ದಿನಗಳ ‘ಅಖಿಲ ಭಾರತ ಶಿಕ್ಷಣ ಸಮಾವೇಶ’ವನ್ನು ಆಯೋಜಿಸಲಾಗಿದೆ. ಈ ಶಿಕ್ಷಣ ಸಮಾವೇಶ ಉದ್ಘಾಟನೆಯನ್ನು ಗೌರವಾನ್ವಿತ ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ.ನಿಮ್ಮೆಲ್ಲರನ್ನೂ ಈ ಉತ್ಸವದಲ್ಲಿ ಭಾಗವಹಿಸಲು ನಾನು ಆಹ್ವಾನಿಸುತ್ತೇನೆ. ಭಾರತದ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಆಮಂತ್ರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!