ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರಕಾರ ಗೊಂದಲದ ಗೂಡಾಗಿದ್ದು, ಈಗಾಗಲೇ ಸಚಿವರ ವಿರುದ್ಧ ಶಾಸಕರು ಅಸಮಾಧಾನ ಹೊರಹಾಕಿದ್ದು, ಇದರ ಬೆನ್ನಲ್ಲೇ ಸಿಎಂ ರೇಸ್ ಶುರುವಾಗಿದೆ.
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಈ ಅವಧಿಯಲ್ಲಿ ಸಿಎಂ ರೇಸ್‌ನಲ್ಲಿ ನಾನಿಲ್ಲ.ಆದ್ರೆ ಮುಂದಿನ ಅವಧಿಯಲ್ಲಿ ರೇಸ್ನಲ್ಲಿ ಇರುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಸಿಎಂ ಆಗುವ ಅಸೆ ಬಿಚ್ಚಿಟ್ಟಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಅಧಿಕಾರ ಹಂಚಿಕೆ ಬಗ್ಗೆ ನಮಗೆ ಮಾಹಿತಿ ಇಲ್ಲ. ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು, ನಮ್ಮ ಜೊತೆ ಯಾರೂ ಚರ್ಚೆ ಮಾಡಿಲ್ಲ. ಸಿದ್ದರಾಮಯ್ಯನವರು ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದಾರೆ ಎಂದರು.
ಗುರುವಾರ ಸಿಎಲ್ ಪಿ ಸಭೆ ಶಾಂತವಾಗಿ ನಡೆದಿದೆ. ಕೆಲವು ಸಮಸ್ಯೆ ಇದ್ದೇ ಇರುತ್ತದೆ, ಇಲ್ಲಾ ಅಂತಾ ಹೇಳೋಕೆ ಆಗಲ್ಲ. ವರ್ಗಾವಣೆ ವಿಚಾರವಾಗಿ ನಮಗೂ ಇತಿಮಿತಿ ಇದೆ. ಕೇವಲ 6% ವರ್ಗಾವಣೆ ನಾವು ಮಾಡಬಹುದು. ಉಳಿದದ್ದು ಸಿಎಂ ಮಾಡಬೇಕು. ಕೆಲವೊಂದಕ್ಕೆ ಶಾಸಕರಿಗೆ ಇದು ಮನವರಿಕೆ ಆಗೋದಿಲ್ಲ ಎಂದರು.