ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರಕ್ಕೆ ಇಂದು ವಿಪಕ್ಷಗಳ ‘ಇಂಡಿಯಾ’ದ ನಾಯಕರು ಭೇಟಿ ನೀಡಿದ್ದು, ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ವಿಪಕ್ಷ ಸಂಸದರ ಮಣಿಪುರ ಭೇಟಿ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ವಾಗ್ದಾಳಿ ನಡೆಸಿದ್ದು, ಇವೆಲ್ಲಾ ಕೇವಲ ನಾಟಕವಷ್ಟೇ ಎಂದು ಹೇಳಿದ್ದಾರೆ.
ರಾಜಸ್ತಾನ, ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧ ಹೇಯ ಕೃತ್ಯಗಳು ನಡೆದಿದ್ದವು. ಆಗೇಕೆ ಈ ನಾಯಕರು ಆ ರಾಜ್ಯಗಳಿಗೆ ಭೇಟಿ ನೀಡಲಿಲ್ಲ ವಾಗ್ದಾಳಿ ನಡೆಸಿದರು. .
ವಿಪಕ್ಷಗಳ INDIA ಮೈತ್ರಿಕೂಟ ಮಣಿಪುರದಿಂದ ವಾಪಸ್ಸಾದ ಬಳಿಕ ಅವರನ್ನು ಪಶ್ಚಿಮಬಂಗಾಳಕ್ಕೂ ಕರೆದುಕೊಂಡು ಹೋಗುವಂತೆ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ.ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧ ನಡೆದ ಕೃತ್ಯಗಳನ್ನು ಅಧೀರ್ ರಂಜನ್ ಚೌಧರಿಯವರು ಸಮರ್ಥಿಸಿಕೊಳ್ಳುತ್ತಾರೆಯೇ? ಈ 20 ಸಂಸದರು ರಾಜಸ್ತಾನ, ಪಶ್ಚಿಮ ಬಂಗಾಳ ರಾಜ್ಯಗಳಿಗೂ ಭೇಟಿ ನೀಡಿ, ವರದಿ ನೀಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.