Friday, September 29, 2023

Latest Posts

ಮಕ್ಕಳ ಜೊತೆ ಮಗುವಾದ ಮೋದಿ: ಚಿಣ್ಣರ ಮಾತಿಗೆ ಮನಸೋತ ಪ್ರಧಾನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಅಖಿಲ ಭಾರತ ಶಿಕ್ಷಾ ಸಮಾಗಮ್ ನಲ್ಲಿ ಇಂದು ಪ್ರಧಾನಿ ಮೋದಿ ಪುಟಾಣಿ ಮಕ್ಕಳ ಜೊತೆ ತಮ್ಮ ಸಮಯವನ್ನು ಕಳೆದರು.

ಅಖಿಲ ಭಾರತ ಶಿಕ್ಷಾ ಸಮಾಗಮ್ ಉದ್ಘಾಟಿಸಿದ ಬಳಿಕ ಮೋದಿ, ಶಾಲೆಗೆ ತೆರಳಿ ಮಕ್ಕಳನ್ನು ಭೇಟಿಯಾಗಿದ್ದಾರೆ. ಈ ವೇಳೆ ಪ್ರಧಾನಿ ಕಂಡ ತಕ್ಷಣ ಮಕ್ಕಳು ಓಡೋಡಿ ಬಂದು ಆತ್ಮೀಯ ಸ್ವಾಗತ ನೀಡಿದ್ದಾರೆ.

ನಮಸ್ತೆ ಮೋದಿಜಿ ಎಂದು ಸ್ವಾಗತ ಕೋರಿದ ಮಕ್ಕಳು ಮೋದಿಯನ್ನು ಅಪ್ಪಿಕೊಂಡು ಮಾತನಾಡಿದ್ದಾರೆ. ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿದ ಪ್ರಧಾನಿ, ನಿಮಗೆ ಮೋದಿ ಗೊತ್ತಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತಿ ಮಕ್ಕಳು ಥಟ್ಟನೆ ಉತ್ತರ ಹೇಳಿದ್ದಾರೆ. ನಾನು ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇನೆ, ನಾನೂ ನೋಡಿದ್ದೇನೆ ಎಂದು ಪುಟಾಣಿಗಳು ಉತ್ತರಿಸಿದ್ದಾರೆ.

ಈ ವೇಳೆ ಮರು ಪ್ರಶ್ನಿಸಿದ ಪ್ರಧಾನಿ, ಟಿವಿಯಲ್ಲಿ ನಾನು ಏನು ಮಾಡುತ್ತಿದ್ದೆ? ಏನು ನೋಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಫೋಟೋ , ವಿಡಿಯೋವನ್ನು ಟೀವಿಯಲ್ಲಿ ನೋಡಿದ್ದೇನೆ ಎಂದು ಮಕ್ಕಳು ಉತ್ತರಿಸಿದ್ದಾರೆ. ಇದೇ ವೇಳೆ ನೀವು ಏನು ಆಟವಾಡುತ್ತಿದ್ದೀರಿ. ನನಗೆ ಸ್ವಲ್ಪ ಹೇಳಿಕೊಡಿ ಎಂದು ಮಕ್ಕಳ ಜೊತೆ ಪ್ರಧಾನಿ ಮೋದಿ ಕೂಡ ಮಗುವಾಗಿದ್ದಾರೆ.

ಪುಟಾಣಿಗಳ ಪುಟ್ಟ ಪುಟ್ಟ ಪ್ರಶ್ನೆಗಳಿಗೆ ನಗುತ್ತಾ ಉತ್ತರಿಸಿದ ಪ್ರಧಾನಿ, ಮಕ್ಕಳ ಆಟ ಪಾಠಗಳ ಕುರಿತು ಮಾತನಾಡಿದರು. ಮಕ್ಕಳ ಬಳಿ ಬಂದ ಮೋದಿ, ಯಾವ ಕಲರ್ ಪೈಟಿಂಗ್ ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇತ್ತ ಮಕ್ಕಳು ಮೋದಿಜೀ, ನಾವು ಪೈಟಿಂಗ್ ಮಾಡುತ್ತಿದ್ದೇವೆ. ಇದು ರೆಡ್ ಕಲರ್ ಎಂದಿದ್ದಾರೆ. ಇನ್ನು ಮತ್ತೊಬ್ಬ ಪುಟಾಣಿ ಮೋದಿಜಿ ನೀವು ನಮ್ಮ ಜೊತೆ ಫೋಟೋ ಕ್ಲಿಕ್ಕಿಸುತ್ತೀರಾ ಎಂದು ಪುಟಾಣಿಗಳು ಕೇಳಿದ್ದಾರೆ. ಅರೇ ಫೋಟ, ಸರಿ ಎಂದು ಮಕ್ಕಳೊಂದಿಗೆ ಮೋದಿ ಫೋಟೋಗೆ ಫೋಸ್ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!