ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಹುಲಿ ಯೋಜನೆ ಪ್ರಾಧಿಕಾರವು 2022ರ ಹುಲಿ ಗಣತಿ (Tiger Census) ರಾಜ್ಯವಾರು ವರದಿಯನ್ನು ಬಿಡುಗಡೆಗೊಳಿಸಿದೆ.
ಮೊದಲ ಸ್ಥಾನವನ್ನು ಮಧ್ಯಪ್ರದೇಶ (Madhya Pradesh) ಪಡೆದುಕೊಂಡಿದ್ದು, ಕರ್ನಾಟಕ (Karnataka) ಎರಡನೇ ಸ್ಥಾನ ಪಡೆದುಕೊಂಡಿದೆ. ಮೂರನೇ ಸ್ಥಾನವನ್ನು ಉತ್ತರಾಖಂಡ (Uttarakhand) ಪಡೆದುಕೊಂಡಿದೆ.
2022ರ ಹುಲಿ ಗಣತಿ ವರದಿ ಪ್ರಕಾರ, ಕರ್ನಾಟಕದಲ್ಲಿ 563 ಹುಲಿಗಳಿವೆ. ಮಧ್ಯಪ್ರದೇಶದಲ್ಲಿ 785 ಹುಲಿಗಳಿದ್ದು, ಮೂರನೇ ಸ್ಥಾನದಲ್ಲಿರುವ ಉತ್ತರಾಖಂಡದಲ್ಲಿ 560 ಹುಲಿಗಳಿವೆ. ಒಟ್ಟಾರೆಯಾಗಿ ಭಾರತ ದೇಶದಲ್ಲಿ ಒಟ್ಟು ಹುಲಿಗಳ ಸಂಖ್ಯೆ 3,682 ಇದೆ.
2018 ರ ಗಣತಿಯಲ್ಲಿ ಮಧ್ಯಪ್ರದೇಶ ಮತ್ತು ಕರ್ನಾಟಕಕ್ಕೂ ಕೇವಲ ಎರಡು ಹುಲಿಯಷ್ಟೆ ವ್ಯತ್ಯಾಸ ಇತ್ತುಈ ಬಾರಿ 222 ಹುಲಿಗಳ ವ್ಯತ್ಯಾಸ ಕಂಡುಬಂದಿದೆ. ಅಂದರೆ, ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಹೀಗಾಗಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ಈ ಸಮೀಕ್ಷಾ ವರದಿ ಎಚ್ಚರಿಕೆ ಗಂಟೆಯಾಗಿದೆ.