ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಗೃಹಿಣಿಯರು ಟೊಮ್ಯಾಟೊ ಬಾತ್ ಮಾಡೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ, ಸಾಂಬಾರ್ ಮಾಡೋದಕ್ಕೆ ಅನಿವಾರ್ಯವಾಗಿ ಅರ್ಧ ಟೊಮ್ಯಾಟೊ ಹಾಕ್ತಿದ್ದಾರೆ. ಆದರೆ ಈಗ ಮತ್ತೆ ಟೊಮ್ಯಾಟೊ ಬೆಲೆ ಏರಿಕೆಯಾಗಿದ್ದು, ಅರ್ಧ ಟೊಮ್ಯಾಟೊಗೂ ಕತ್ತರಿ ಬೀಳೋ ಸಾಧ್ಯತೆ ಇದೆ.
ಟೊಮ್ಯಾಟೊ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲದವರೇ ಟೊಮ್ಯಾಟೊ ಬೆಳೆ ಬೆಳೆದು ಲಕ್ಷಾಧೀಶ್ವರರಾಗ್ತಿದ್ದಾರೆ. ಎಲ್ಲವೂ ಟೊಮ್ಯಾಟೊ ಬೆಲೆ ಏರಿಕೆ ಮಹಿಮೆಯಾಗಿದೆ. ಈಗ 80-100 ರೂಪಾಯಿ ಇದ್ದ ಟೊಮ್ಯಾಟೊ ಬೆಲೆ ಇದೀಗ 150 ರೂಪಾಯಿವರೆಗೆ ಬಂದಿದೆ. ಒಂದು ಕೆಜಿ ಟೊಮ್ಯಾಟೊಗೆ 150 ರೂಪಾಯಿ ಕೊಡೋ ಬದಲು ಹುಣಸೆಹುಳಿ ಹಾಕಿ ಅಡುಗೆ ಮಾಡೋಕೆ ಜನ ನಿರ್ಧರಿಸ್ತಿದ್ದಾರೆ.
ಮಳೆ, ಟೊಮ್ಯಾಟೊಗೆ ಡಿಮ್ಯಾಂಡ್ ಹಾಗೂ ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿರುವ ಕಾರಣ ಬೆಲೆ ಹೆಚ್ಚಾಗುತ್ತಲೇ ಇದೆ.