ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಮೆಲ್ಬೋರ್ನ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು, ಮತ್ತೆ ಮೆಲ್ಬೋರ್ನ್‌ಗೆ ವಾಪಾಸಾದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಬೋಯಿಂಗ್ ಡ್ರೀಮ್‌ಲೈನರ್ AI 309ವಿಮಾನ ಅಸ್ವಸ್ಥ ಪ್ರಯಾಣಿಕ ಮತ್ತು ಅವರ ಕುಟುಂಬ ಸದಸ್ಯರನ್ನು ಇಳಿಸಿದ ನಂತರ ಮತ್ತೆ ದೆಹಲಿಗೆ ಹೊರಟಿತು.
ಪ್ರಯಾಣಿಕರೊಬ್ಬರು ಅಸ್ವಸ್ಥರಾಗಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕಾಗಿದೆ ಎಂದು ಬೋರ್ಡ್ ವೈದ್ಯರು ಸೂಚಿಸಿದರು. ಇದು ವೈದ್ಯಕೀಯ ತುರ್ತುಸ್ಥಿತಿಯಾಗಿದ್ದರಿಂದ, ವಿಮಾನ ಕೂಡಲೇ ಮೆಲ್ಬೋರ್ನ್‌ಗೆ ಮರಳಿತು ಎಂದು ವಿಮಾನಯಾನ ಅಧಿಕಾರಿ ತಿಳಿಸಿದ್ದಾರೆ.