ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಪಿಂಗ್ ಮಾಲ್ ಗಳಿಗೆ ಹೋದಾಗ.. ಟಾಯ್ಲೆಟ್, ಬಾತ್ ರೂಂ, ಹೋಟೆಲ್ ರೂಮ್ ಗಳಿಗೆ ಹೋದಾಗ ಅಲ್ಲಿ ಕನ್ನಡಿಗಳು ಕಾಣಸಿಗುತ್ತವೆ. ಆದರೆ ಅವು ನಿಜವಾದ ಕನ್ನಡಿಗಳೇ? ಎಂದು ಎಷ್ಟು ಜನರಿಗೆ ಖಚಿತವಾಗಿ ತಿಳಿದಿದೆ. ವಿಶೇಷವಾಗಿ ಮಹಿಳೆಯರು ನಿಜವಾದ ಕನ್ನಡಿ ಮತ್ತು 2ವೇ ಗ್ಲಾಸ್ ನಡುವಿನ ವ್ಯತ್ಯಾಸವನ್ನು ತಿಳಿದಿರಬೇಕು.
ನಿಜವಾದ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬ ಮಾತ್ರ ಗೋಚರಿಸುತ್ತದೆ. ಎರಡನೆಯದು 2 ವೇ ಗ್ಲಾಸ್ ಅಂದರೆ ನಾವು ಎರಡೂ ಬದಿಗಳನ್ನು ನೋಡುತ್ತೇವೆ. ಇದರಲ್ಲಿ ನಾವು ಇತರರಿಗೂ ಸಹ ಕಾಣುತ್ತೇವೆ. ಆದರೆ ಇದು ನಮಗೆ ಗೊತ್ತಾಗುವುದೇ ಇಲ್ಲ. ಹೀಗಿರುವಾಗ ಕೆಲವು ಯಡವಟ್ಟುಗಳಾಗುತ್ತವೆ. ಅವುಗಳನ್ನು ತಪ್ಪಿಸಲು ಕನ್ನಡಿ ಯಾವುದೆಂದು ತಿಳಿಯಿರಿ.
ಇದು ನಿಜವಾದ ಕನ್ನಡಿಯೇ ಅಥವಾ ಅಲ್ಲವೇ ಎಂದು ತಿಳಿಯಲು, ನಿಮ್ಮ ಬೆರಳಿನ ತುದಿಯನ್ನು ಕನ್ನಡಿಯ ಮೇಲೆ ಇರಿಸಿ. ನಿಮ್ಮ ಬೆರಳಿನ ತುದಿ ಮತ್ತು ಗೋಚರಿಸುವ ಪ್ರತಿಬಿಂಬದ ನಡುವೆ ಅಂತರವಿದ್ದರೆ ಅದನ್ನು ನಿಜವಾದ ಕನ್ನಡಿ ಎಂದು ಪರಿಗಣಿಸಬೇಕು. ಮತ್ತು 2 ವೇ ಗ್ಲಾಸ್.. ನಿಮ್ಮ ಬೆರಳಿನ ತುದಿಯು ಕನ್ನಡಿಯಲ್ಲಿರುವ ಪ್ರತಿಬಿಂಬವನ್ನು ಸ್ಪರ್ಶಿಸುತ್ತಿದ್ದರೆ ನೀವು ತುಂಬಾ ಜಾಗರೂಕರಾಗಿರಬೇಕು. ಇದು 2 ವೇ ಗ್ಲಾಸ್ ಆಗಿದೆ. ನೀವು ಇನ್ನೊಂದು ಕಡೆಯಿಂದ ನೋಡುವ ಸಾಧ್ಯತೆಗಳಿವೆ. ವಿಶೇಷವಾಗಿ ಮಹಿಳೆಯರು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ನೀವು ಎಲ್ಲಿಗೆ ಹೋದರೂ ನಿಮ್ಮ ಬೆರಳುಗಳಿಂದ ಕನ್ನಡಿಯನ್ನು ಪರೀಕ್ಷಿಸಿ. ನಮಗೆ ನಮ್ಮ ಭದ್ರತೆ ತುಂಬಾ ಬೇಕು ಇದನ್ನು ಹೆಣ್ಮಕ್ಕಳು ಗಮನದಲ್ಲಿಡಿ.