ಹೊಸದಿಗಂತ ಡಿಜಿಟಲ್ ಡೆಸ್ಕ್:
ರೆಸ್ಟೋರೆಂಟ್ ಆನ್ ವೀಲ್ಸ್..ಇದು ಇರೋದು ಹೈದರಾಬಾದ್‌ನ ಕಾಚಿಗುಡದಲ್ಲಿ. ದಕ್ಷಿಣ ಮಧ್ಯ ರೈಲ್ವೆಯ ಉತ್ತೇಜನದೊಂದಿಗೆ, ಕಾಚಿಗುಡಾದಲ್ಲಿ ರೈಲು ಬೋಗಿಗಳನ್ನು ರೆಸ್ಟೋರೆಂಟ್‌ಗಳಾಗಿ ಪರಿವರ್ತಿಸಲಾಗಿದೆ. ಇಲ್ಲಿ ಮಾತ್ರವಲ್ಲ ಹೈದರಾಬಾದಿಗೆ ದೇಶದಾದ್ಯಂತ ಸಿಗುವ ವೈವಿಧ್ಯಮಯ ರುಚಿಗಳನ್ನು ಪರಿಚಯಿಸಲಾಗುತ್ತಿದೆ. ಹೈದರಾಬಾದ್ ಹೊರತುಪಡಿಸಿ ತೆಲಂಗಾಣದಲ್ಲಿ ಎಲ್ಲಿಯೂ ಇಂತಹ ರೆಸ್ಟೋರೆಂಟ್ ಆನ್ ವೀಲ್ಸ್ ಪರಿಕಲ್ಪನೆಯೊಂದಿಗೆ ಸೂಕ್ತವಾದ ಹೋಟೆಲ್ ಇಲ್ಲ ಎಂದು ರೆಸ್ಟೋರೆಂಟ್ ವ್ಯವಸ್ಥಾಪಕರು ಹೇಳುತ್ತಾರೆ.
ಹೈದರಾಬಾದಿನ ಜೈಲ್ ಮಂಡಿ ಮತ್ತು ರೈಲ್ ಮಂಡಿಯಂತೆ ಕಾಚೀಗೂಡ ರೈಲು ನಿಲ್ದಾಣದಲ್ಲಿ ಪರಿವಾರ್ ಫುಡ್ ಎಕ್ಸ್‌ಪ್ರೆಸ್ ಎಂಬ ರೈಲು ರೆಸ್ಟೋರೆಂಟ್ ಲಭ್ಯವಾಗಿದೆ. ದಿನದ 24 ಗಂಟೆಯೂ ಈ ರೆಸ್ಟೋರೆಂಟ್‌ನಲ್ಲಿ ಸೇವೆಗಳು ಲಭ್ಯವಿವೆ. ಇದರಲ್ಲಿ ಒಂದೇ ಬಾರಿಗೆ 120 ಗ್ರಾಹಕರು ಕುಳಿತು ಭೋಜನ ಸವಿಯಬಹುದು. ನಿಮ್ಮ ಆರ್ಡರ್ ಕೂಡ ಸುಲಭ, ಟೇಬಲ್ ಮೇಲಿರುವ ವಾಕಿ-ಟಾಕಿ ಮೂಲಕ ನಿಮಗೆ ಬೇಕಾದ ಖಾದ್ಯ ಆರ್ಡರ್ ಮಾಡಬಹುದು. ಇನ್ನೂ ರುಚಿಗೂ ಯಾವುದೇ ರಾಜಿ ಇಲ್ಲವಂತೆ.
ರೈಲು ನಿಲ್ದಾಣದ ಬಳಿ ಇರುವ ಈ ಹೋಟೆಲ್ ಹಲವು ವಿಶೇಷತೆಗಳನ್ನು ಹೊಂದಿದೆ. ಬೋಗಿಗಳಿಂದ ತುಂಬಿದ ರೈಲಿನಂತೆ ಭಾಸವಾಗದಂತೆ ಒಳಾಂಗಣವನ್ನು ಸುಂದರವಾಗಿ ನವೀಕರಿಸಲಾಗಿದೆ. ಬ್ರಿಟಿಷರ ಕಾಲದ ಸುಂದರ ಚಿತ್ರಗಳನ್ನು ಬೋಗಿಯಲ್ಲಿ ಜೋಡಿಸಲಾಗಿದೆ. ಅಲ್ಲಿ ಇಟ್ಟಿರುವ ಪ್ರತಿಯೊಂದು ಚಿತ್ರಕ್ಕೂ ವಿಭಿನ್ನ ಇತಿಹಾಸವಿದೆ. ಬ್ರಿಟೀಷ್ ಆಡಳಿತವನ್ನು ನೆನಪಿಸುವಂತೆ ರೆಸ್ಟೋರೆಂಟ್ ಅನ್ನು ಸುಂದರವಾಗಿ ಅಲಂಕರಿಸಲಾಗಿದೆ.