Tuesday, October 3, 2023

Latest Posts

ನಾಳೆಯಿಂದ ಜೀವನ ದುಬಾರಿ: ಹೊಟೇಲ್ ಊಟ-ತಿಂಡಿ, ನಂದಿನಿ ಹಾಲು ಎಲ್ಲದರ ಬೆಲೆ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಗಸ್ಟ್ 1ರಿಂದ ಎಲ್ಲವೂ ದುಬಾರಿ, ಹೌದು, ನಂದಿನಿ ಹಾಲು, ಹೊಟೇಲ್‌ನಲ್ಲಿ ಊಟ ತಿಂಡಿ ಇನ್ನು ತರಕಾರಿಗಳ ಬಗ್ಗೆ ಹೇಳೋದೇ ಬೇಡ ಎನ್ನುವಂತಾಗಿದೆ.

ಮಧ್ಯಮ ವರ್ಗದವರಿಗೆ ಚುರುಕು ಮುಟ್ಟಿದ್ದು, ಎಲ್ಲವೂ ಮತ್ತಷ್ಟು ದುಬಾರಿ ಎನಿಸಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನನಲ್ಲಿ ಹೊಟೇಲ್‌ಗಳ ಖಾದ್ಯದ ಬೆಲೆ ಏರಿಕೆಗೆ ಹೊಟೇಲ್ ಸಂಘ ತೀರ್ಮಾನ ಮಾಡಿದೆ.

ನಂದಿನಿ ಹಾಲಿನ ದರ ನಾಳೆಯಿಂದ ಲೀಟರ್‌ಗೆ ಮೂರು ರೂಪಾಯಿ ಹೆಚ್ಚಳವಾಗುತ್ತಿದ್ದು, ಹಾಲನ್ನು ಬಳಸಿ ಕಾಫಿ ಮಾಡುವ ಹೊಟೇಲ್‌ಗಳೂ ಕೂಡ ಬೆಲೆಯನ್ನು ಹೆಚ್ಚು ಮಾಡಿವೆ. ಶೇ.10ರಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಕಾಫಿ ಬೆಲೆ ಮೂರು ರೂಪಾಯಿ ಹಾಗೂ ತಿಂಡಿ ಬೆಲೆ 5-10ರೂಪಾಯಿ ಹೆಚ್ಚಾಗುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!